Publish Date: Wed, 09 Oct 2019 (09:06 IST)
Updated Date: Wed, 09 Oct 2019 (09:08 IST)
ಮುಂಬೈ: ಟೀಂ ಇಂಡಿಯಾ ಬೌಲರ್ ಗಳು ಯಶಸ್ಸು ಕಾಣುತ್ತಿರುವುದಕ್ಕೆ ಪಿಚ್ ಗಳು ಕಾರಣವಲ್ಲ. ನಮಗೆ ಬೇಕಾದಂತ ಪಿಚ್ ನಿರ್ಮಿಸಲು ನಾವು ಡಿಮ್ಯಾಂಡ್ ಮಾಡೋದಿಲ್ಲ ಎಂದು ಬೌಲಿಂಗ್ ಕೋಚ್ ಭರತ್ ಅರುಣ್ ಹೇಳಿದ್ದಾರೆ.
‘ನಮಗೆ ಬೇಕಾದ ಪಿಚ್ ಗೆ ನಾವು ಡಿಮ್ಯಾಂಡ್ ಮಾಡಲ್ಲ. ಯಾವುದೇ ಪಿಚ್ ನಲ್ಲಿ, ಪರಿಸ್ಥಿತಿಗಳಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯವಿರುವ ತಂಡವೇ ನಿಜವಾಗ ನಂ.1 ತಂಡ ಎಂಬುದು ನಮ್ಮ ಅಭಿಪ್ರಾಯ’ ಎಂದು ಭರತ್ ಅರುಣ್ ಅಭಿಪ್ರಾಯಪಟ್ಟಿದ್ದಾರೆ.
‘ವಿದೇಶದಲ್ಲಿದ್ದಾಗ ನಾವು ವೇಗದ ಪಿಚ್ ಗೆ ಹೊಂದಿಕೊಳ್ಳಲು ಅಭ್ಯಾಸಮಾಡಬೇಕು ಎಂಬ ಮಾತುಗಳು ಬರುತ್ತವೆ. ನಮ್ಮಲ್ಲಿ ಆಡುವಾಗ ಮೊದಲ ದಿನವೇ ಸ್ಪಿನ್ನರ್ ಗಳು ಕ್ಲಿಕ್ ಆಗುವುದು ಹೇಗೆ ಎಂದು ಕಾಮೆಂಟ್ ಮಾಡುತ್ತಾರೆ’ ಎಂದು ಅರುಣ್ ಹೇಳಿಕೊಂಡಿದ್ದಾರೆ.