Publish Date: Wed, 30 Oct 2019 (06:01 IST)
Updated Date: Wed, 30 Oct 2019 (06:04 IST)
ಬೆಂಗಳೂರು : ಗಂಡನ ಶ್ರೇಯಸ್ಸು ಹೆಂಡತಿ ಮಾಡುವ ಒಳ್ಳೆಯ ಕಾರ್ಯದಲ್ಲಿರುತ್ತದೆ. ಹೆಂಡತಿ ಗಂಡನ ಪಾಲಿನ ಅದೃಷ್ಟ ಲಕ್ಷ್ಮೀಯಾಗಿರುವುದರಿಂದ ಬೆಳಿಗ್ಗೆ ಎದ್ದ ತಕ್ಷಣ ಹೆಣ್ಣುಮಕ್ಕಳು ಈ ಕೆಲಸ ಮಾಡಿದರೆ ಗಂಡನಿಗೆ ಹೋದ ಕಡೆ ಯಶಸ್ಸು ಸಿಗುತ್ತದೆ.
ಗಂಡನ ಆಯಸ್ಸು ಹೆಚ್ಚಿಸಲು ಹಾಗೂ ಗಂಡನಿಗೆ ಹೋದ ಕಡೆ ಯಶಸ್ಸು ಲಭಿಸಬೇಕೆಂದರೆ ಬೆಳಿಗ್ಗೆ ಎದ್ದ ತಕ್ಷಣ ಹೆಣ್ಣಮಕ್ಕಳು ದೇವಿಯ ಸ್ವರೂಪವಾದ ತಮ್ಮ ಮಾಂಗಲ್ಯವನ್ನು ನೋಡಿ ಅದಕ್ಕೆ ನಮಸ್ಕರಿಸಬೇಕು. ಬಳಿಕ ಭೂಮಿ ತಾಯಿಯನ್ನು ಮುಟ್ಟಿ ನಮಸ್ಕರಿಸಬೇಕು, ನಂತರ ನಿಮ್ಮ ಮನೆ ದೇವರಿಗೆ ನಮಸ್ಕರಿಸಿ ಮುಂದಿನ ಕೆಲಸ ಮಾಡಬೇಕು. ಹೀಗೆ ಮಾಡಿದರೆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ. ಗಂಡನಿಗೆ ಯಶಸ್ಸು ಸಿಗುತ್ತದೆ.