Select Your Language

Notifications

webdunia
webdunia
webdunia
webdunia

ಭಜನೆ ಮಾಡಿದ ಹಿಂದೂ ಹುಡುಗಿಯರನ್ನು ಮರದ ಅಡಿಯಲ್ಲಿ ಮಲಗಿಸಿದರು: ಅಧಿಕಾರಿಯ ವಿವಾದಾತ್ಮಕ ಹೇಳಿಕೆ

Sanjiv Poojari

Krishnaveni K

ಮಂಗಳೂರು , ಗುರುವಾರ, 17 ಅಕ್ಟೋಬರ್ 2024 (16:39 IST)
ಮಂಗಳೂರು: ಹಿಂದೂ ಧರ್ಮದ ಒಂದು ಸಮುದಾಯದಲ್ಲಿ 1 ಲಕ್ಷ ಹೆಣ್ಣು ಮಕ್ಕಳು ವೇಶ್ಯೆಯರು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಪಂಜ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ವಿವಾದಾತ್ಮಕ ಮಾತನಾಡಿದ್ದು ದೂರು ದಾಖಲಾಗಿದೆ.

ಹಿಂದೂ ಸಂಘಟನೆಯ ಕಾರ್ಯಕರ್ತ ಸುರೇಶ್ ಎಂಬವರ ಜೊತೆಗೆ ದೂರವಾಣಿಯಲ್ಲಿ ಮಾತನಾಡುವಾಗ ಉಪ ಅರಣ್ಯಾಧಿಕಾರಿ ಸಂಜೀವ್ ಪೂಜಾರಿ  ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದು ವೈರಲ್ ಆಗಿದ್ದು, ಹಿಂದೂ ಸಂಘಟನೆಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಹಿಂದೂ ಧರ್ಮದ ಒಂದು ಸಮುದಾಯದ 1 ಲಕ್ಷ ಹುಡುಗಿಯರು ವೇಶ್ಯೆಯರಾಗಿದ್ದಾರೆ. ಇದಕ್ಕೆ ನನ್ನಲ್ಲಿ 10,000 ದಾಖಲೆಗಳಿವೆ. ಹಿಂದುತ್ವದ ಹುಡುಗರು ವೇಶ್ಯೆಯರಾಗಿ ಮಾಡಿದ್ದಾರೆ. ಇದಕ್ಕೆ ಹಿಂದೂ ಸಂಘಟನೆಯ ಯುವಕರು ಕಾರಣ. ಭಜನೆ ಮಾಡಿದ ಹುಡುಗಿಯರನ್ನು ಮರದ ಅಡಿಯಲ್ಲಿ ಮಲಗಿಸಿದರು ಎಂದು ಅಶ್ಲೀಲವಾಗಿ ಮಾತನಾಡಿದ್ದಾರೆ.

ಹಿಂದೂ ಹುಡುಗಿಯರ ಬಗ್ಗೆ ಅಶ್ಲೀಲವಾಗಿ ಮಾತನಾಡಿದ ಈತನ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಈ ಬಗ್ಗೆ ಹಿಂದೂ ಜಾಗರಣ ವೇದಿಕೆ ಸದಸ್ಯರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಕ್ಷಣವೇ ಈತನನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ದೀಪಾವಳಿ ಸಂದರ್ಭ ರಾಜ್ಯದಲ್ಲಿ ವಿಶೇಷ ರೈಲು ಸಂಚಾರ: ಕೇಂದ್ರ ಸಚಿವ ಸೋಮಣ್ಣ