Select Your Language

Notifications

webdunia
webdunia
webdunia
webdunia

ದೀಪಾವಳಿ ಸಂದರ್ಭ ರಾಜ್ಯದಲ್ಲಿ ವಿಶೇಷ ರೈಲು ಸಂಚಾರ: ಕೇಂದ್ರ ಸಚಿವ ಸೋಮಣ್ಣ

Railway Department

Sampriya

ಬೆಂಗಳೂರು , ಗುರುವಾರ, 17 ಅಕ್ಟೋಬರ್ 2024 (16:35 IST)
ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಸಮಯದಲ್ಲಿ ಪ್ರಯಾಣಿಕರ ದಟ್ಟಣೆ ಜಾಸ್ತಿ ಇರಲಿರುವುದರಿಂದ ಇದೇ 31 ರಿಂದ ನವೆಂಬರ್ 2 ವರೆಗೆ ರಾಜ್ಯದ್ಯಂತ ವಿಶೇಷ ರೈಲುಗಳು ಸಂಚರಿಸಲಿವೆ ಎಂದು ರೈಲ್ವೇ ಖಾತೆಯ ರಾಜ್ಯ ಸಚಿವ ಸೋಮಣ್ಣ ಅವರು ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ.  

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಜನದಟ್ಟಣೆ ನಿಯಂತ್ರಿಸಿ, ಸುಗಮ ಸಂಚಾರಕ್ಕಾಗಿ ವಿಶೇಷ ರೈಲುಗಳ ಸಂಚಾರದ ವ್ಯವಸ್ಥೆ ಮಾಡಲಾಗಿದೆ. ಇದೇ ಅಕ್ಟೋಬರ್ 31 ರಿಂದ ನವೆಂಬರ್ 2 ವರೆಗೆ ರಾಜ್ಯದಾದ್ಯಂತ ವಿಶೇಷ ರೈಲುಗಳು ಸಂಚರಿಸಲಿವೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಜನದಟ್ಟಣೆ ನಿಯಂತ್ರಿಸಿ, ಸುಗಮ ಸಂಚಾರಕ್ಕಾಗಿ ವಿಶೇಷ ರೈಲುಗಳ ಸಂಚಾರದ ವ್ಯವಸ್ಥೆ ಮಾಡಲಾಗಿದೆ. ಇದೇ ಅಕ್ಟೋಬರ್ 31, 2024 ರಿಂದ ನವೆಂಬರ್ 2, 2024 ರ ವರೆಗೆ ರಾಜ್ಯದಾದ್ಯಂತ ವಿಶೇಷ ರೈಲುಗಳು ಸಂಚರಿಸಲಿವೆ.

ರಾಜ್ಯದ ಪ್ರಮುಖ ರೈಲ್ವೆ ನಿಲ್ದಾಣಗಳಾದ ಬೆಳಗಾವಿಯಿಂದ ಮೀರಜ್, ಬೆಂಗಳೂರಿನಿಂದ ಬೆಳಗಾವಿ, ಮೈಸೂರಿನಿಂದ ವಿಜಯಪುರದವರೆಗೆ ಹಾಗೂ ವಿಸ್ತರಿತ ರೈಲ್ವೆ ಮಾರ್ಗ ಹುಬ್ಬಳ್ಳಿಯಿಂದ ರಾಮೇಶ್ವರಂ ಹಾಗೂ ಋಷಿಕೇಶದಿಂದ ಹುಬ್ಬಳ್ಳಿವರೆಗೆ ವಿಶೇಷ ರೈಲುಗಳು ಸಂಚರಿಸಲಿವೆ.

ಪ್ರಯಾಣಿಕರಿಗೆ ಉತ್ತಮ ಸಂಚಾರದ ವ್ಯವಸ್ಥೆ ಕಲ್ಪಿಸಲು ಭಾರತೀಯ ರೈಲ್ವೆ ಒಟ್ಟು 34 ವಿಶೇಷ ರೈಲುಗಳ ವ್ಯವಸ್ಥೆಮಾಡಿದೆ. ಸಾರ್ವಜನಿಕರು ಈ ವಿಶೇಷ ರೈಲುಗಳ ಸೌಲಭ್ಯ ಪಡೆದುಕೊಳ್ಳಿ, ನಿಮ್ಮ ಹಬ್ಬದ ಸಂಭ್ರಮ ಇಮ್ಮಡಿಯಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹರಿಯಾಣದ ಸಿಎಂ ಆಗಿ ನಯಾಬ್‌ ಸಿಂಗ್ ಸೈನಿ ಪ್ರಮಾಣ ಸ್ವೀಕಾರ: ಪ್ರಧಾನಿ ಸೇರಿ ಗಣ್ಯರು ಭಾಗಿ