Select Your Language

Notifications

webdunia
webdunia
webdunia
webdunia

ಇಸ್ರೇಲ್ ಟ್ರಾವೆಲ್ಸ್ ಎಂಬ ಬಸ್ ಹೆಸರನ್ನು ಜೆರುಸಲೇಂ ಎಂದು ಬದಲಿಸಿದ ಮಾಲಿಕ: ಕಾರಣವೇನು ಗೊತ್ತಾ

Israel bus

Krishnaveni K

ಮಂಗಳೂರು , ಸೋಮವಾರ, 7 ಅಕ್ಟೋಬರ್ 2024 (14:02 IST)
ಮಂಗಳೂರು: ಇಸ್ರೇಲ್ ಟ್ರಾವೆಲ್ಸ್ ಎಂದು ಹೆಸರಿಟ್ಟುಕೊಂಡಿದ್ದ ಬಸ್ ಮಾಲಿಕ ಸೋಷಿಯಲ್ ಮೀಡಿಯಾ ಬೆದಿಕೆಗೆ ಜಗ್ಗಿ ಜೆರುಸಲೇಂ ಎಂದು ಹೆಸರು ಬದಲಾಯಿಸಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.
 

ಮೂಡಬಿದಿರೆ-ಕಿನಿಗೋಳಿ-ಕಟೀಲು-ಮುಲ್ಕಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ ಹೆಸರನ್ನು ಮಾಲಿಕ ಇಸ್ರೇಲ್ ಟ್ರಾವೆಲ್ಸ್ ಎಂದು ಇಟ್ಟುಕೊಂಡಿದ್ದ. ಆದರೆ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ದೂರು ನೀಡುವುದಾಗಿ ಬೆದರಿಕೆ ಬಂದಿತ್ತು.

ಇದರ ಬೆನ್ನಲ್ಲೇ ಮಾಲಿಕ ಬಸ್ ಹೆಸರನ್ನು ಜೆರುಸಲೇಂ ಟ್ರಾವೆಲ್ಸ್ ಎಂದು ಬದಲಾಯಿಸಿಕೊಂಡಿದ್ದಾನೆ. 12 ವರ್ಷಗಳಿಂದ ಇದೇ ರೂಟ್ ನಲ್ಲಿ ಬಸ್ ಮಾಲಿಕ ಬಸ್ ಓಡಿಸುತ್ತಿದ್ದ. ಇತ್ತೀಚೆಗೆ ಆತ ಈ ರೂಟ್ ನಲ್ಲಿ ಓಡಾಡುತ್ತಿದ್ದ ಹಳೆಯ ಬಸ್ ಒಂದನ್ನು ಖರೀದಿಸಿ ಇಸ್ರೇಲ್ ಟ್ರಾವೆಲ್ಸ್ ಎಂದು ಹೆಸರಿಟ್ಟಿದ್ದ.

ಇದೀಗ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಸಂಘರ್ಷ ಹೆಚ್ಚಿರುವುದರಿಂದ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಆತನಿಗೆ ಬಸ್ ಗೆ ಇಸ್ರೇಲ್ ಎಂದು ಹೆಸರಿಟ್ಟಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಜನ ಆಕ್ರೋಶ ಬಂದ ಬೆನ್ನಲ್ಲೇ ಬಸ್ ಹೆಸರು ಬದಲಾಯಿಸಲು ತೀರ್ಮಾನಿಸಿದೆ. ಜನಕ್ಕೆ ಈ ಹೆಸರಿನ ಮೇಲೆ ಯಾಕೆ ಆಕ್ಷೇಪ ಎಂದು ಗೊತ್ತಾಗಲಿಲ್ಲ ಎಂದಿದ್ದಾರೆ.

ಇಸ್ರೇಲ್ ಮೇಲೆ ಮಾಲಿಕನಿಗೆ ಯಾಕೆ ಪ್ರೀತಿ?
ಅಷ್ಟಕ್ಕೂ ಈ ಬಸ್ ಮಾಲಿಕನಿಗೆ ಇಸ್ರೇಲ್ ಮೇಲೆ ಯಾಕೆ ಪ್ರೀತಿ ಎಂದು ನೀವು ಕೇಳಬಹುದು. ಅದಕ್ಕೂ ಆತ ಕಾರಣ ನೀಡಿದ್ದಾನೆ. ಇಸ್ರೇಲ್ ನನಗೆ ಜೀವನ ನೀಡಿದೆ. ಇದೇ ದೇಶದಲ್ಲಿ ಜೆರುಸಲೇಂ ಎಂಬ ಪವಿತ್ರ ಭೂಮಿಯಿರುವುದು. ಇಸ್ರೇಲ್ ನ ವ್ಯವಸ್ಥೆ ನನಗೆ ತುಂಬಾ ಇಷ್ಟ. ಆದರೆ ಈಗ ಸೋಷಿಯಲ್ ಮೀಡಿಯಾದಲ್ಲಿ ಇದರ ಬಗ್ಗೆ ಅಕ್ರೋಶ ವ್ಯಕ್ತಪಡಿಸಿದ್ದರಿಂದ ಯಾರಿಗೂ ನೋವಾಗಬಾರದು ಎಂಬ ಉದ್ದೇಶಕ್ಕೆ ಬಸ್ ಹೆಸರನ್ನು ಬದಲಾಯಿಸಿದೆ ಎಂದಿದ್ದಾರೆ. ಬಸ್ ಮಾಲಿಕ ಮೊದಲು ಇಸ್ರೇಲ್ ನಲ್ಲೇ ಕೆಲಸ ಮಾಡುತ್ತಿದ್ದರು. ಈಗ ಕಟೀಲ್ ನಲ್ಲಿ ನೆಲೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯ ಸದ್ಯದಲ್ಲೇ ರಾಜೀನಾಮೆ ಕೊಡಲಿದ್ದಾರೆ: ಬಿ ವೈ ವಿಜಯೇಂದ್ರ ಭವಿಷ್ಯ