Select Your Language

Notifications

webdunia
webdunia
webdunia
webdunia

ಕಂಠಪೂರ್ತಿ ಕುಡಿದು ಐಸಿಯು ಪ್ರವೇಶಿಸಿದ ವೈದ್ಯ: ಮುಂದೇನಾಯ್ತು ವಿಡಿಯೋ ಇಲ್ಲಿದೆ

Hospital

Krishnaveni K

ಮಂಗಳೂರು , ಸೋಮವಾರ, 23 ಸೆಪ್ಟಂಬರ್ 2024 (11:13 IST)
ಮಂಗಳೂರು: ವೈದ್ಯನೊಬ್ಬ ಕಂಠಪೂರ್ತಿ ಕುಡಿದು ಆಸ್ಪತ್ರೆಯ ಐಸಿಯು ಪ್ರವೇಶಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೈದ್ಯರು ಎಂದು ದೇವರ ಸಮಾನ ಎನ್ನುತ್ತೇವೆ. ವೈದ್ಯರನ್ನು ನೋಡಿಯೇ ನಮ್ಮ ಅರ್ಧ ಖಾಯಿಲೆ ವಾಸಿಯಾಗಬೇಕು. ಅವರು ತಮ್ಮ ನಡೆ ನುಡಿಗಳಿಂದಲೇ ರೋಗಿಗಳ ಮನದಲ್ಲಿ ಭರವಸೆ ಹುಟ್ಟಿಸಬೇಕು. ಆದರೆ ವೈದ್ಯರಾದವರೇ ಜನ ಛೀ ಥೂ ಎಂದು ಉಗಿಯುವ ರೀತಿ ನಡೆದುಕೊಂಡರೆ ಹೇಗಾಗಬೇಕು.

ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಈ ಘಟನೆ ನಡೆದಿದೆ. ಮಂಗಳೂರಿನ ಪ್ರತಿಷ್ಠಿತ ಎಜೆ ಹಾಸ್ಪಿಟಲ್ ನಲ್ಲಿ ಪಿಜಿ ವೈದ್ಯ ವಿದ್ಯಾರ್ಥಿಯೊಬ್ಬರು ಕಂಠ ಪೂರ್ತಿ ಕುಡಿದು ರೋಗಿಯನ್ನು ಅಟೆಂಡ್ ಮಾಡಲು ಐಸಿಯು ಪ್ರವೇಶಿಸಿದ್ದಾನೆ. ಈತನ ಶರ್ಟ್ ಪೂರಾ ಮಣ್ಣಿನಿಂದ ಕೊಳೆಯಾಗಿತ್ತು.

ಈತನ ಅವಸ್ಥೆ ನೋಡಿ ಯಾರೋ ಅಪರಿಚಿತ ಐಸಿಯುಗೆ ನುಗ್ಗಿದ್ದಾನೆ ಎಂದುಕೊಂಡಿದ್ದರು. ಆದರೆ ಈತ ವೈದ್ಯ ಎಂದು ತಿಳಿದ ಮೇಲೆ ರೋಗಿಗಳು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಬಳಿಕ ಅಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಗಳು ಆ ವೈದ್ಯನನ್ನು ಅಲ್ಲಿಂದ ಹೊರಗೆ ಕರೆದೊಯ್ದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ದಿನಗೂಲಿ ನೌಕರರಿಗೆ ರಾಜ್ಯ ಸರ್ಕಾರದ ದಸರಾ ಗಿಫ್ಟ್: ಇಲ್ಲಿದೆ ವಿವರ