Select Your Language

Notifications

webdunia
webdunia
webdunia
webdunia

ಸ್ಥಗಿತವಾಗಿದ್ದ ಬೆಂಗಳೂರು- ಮಂಗಳೂರು ರೈಲು ಮತ್ತೇ ಪುನರಾರಂಭ, ಇಲ್ಲಿದೆ ಡೀಟೆಲ್ಸ್

ಸ್ಥಗಿತವಾಗಿದ್ದ ಬೆಂಗಳೂರು- ಮಂಗಳೂರು ರೈಲು ಮತ್ತೇ ಪುನರಾರಂಭ, ಇಲ್ಲಿದೆ ಡೀಟೆಲ್ಸ್

Sampriya

ಹಾಸನ , ಬುಧವಾರ, 14 ಆಗಸ್ಟ್ 2024 (20:18 IST)
ಹಾಸನ: ಭೂಕುಸಿತದಿಂದ ಸ್ಥಗಿತವಾಗಿದ್ದ ಬೆಂಗಳೂರು-ಮಂಗಳೂರು ನಡುವಿನ ಪ್ರಯಾಣಿಕ ರೈಲುಗಳ ಮತ್ತೇ ಪುನರಾರಂಭವಾಗಿದ್ದು, ಪ್ರಯಾಣಿಕರಿಗೆ ಗುಡ್‌ ನ್ಯೂಸ್ ಸಿಕ್ಕಿದೆ.

ಭಾರೀ ಮಳೆಗೆ ಜಿಲ್ಲೆಯ ಸಕಲೇಶಪುರ- ಬಾಳ್ಳುಪೇಟೆ ಮಧ್ಯೆ ಆಚಂಗಿ ಬಳಿ ಆಗಸ್ಟ್‌ 9ರಂದು ಮಧ್ಯರಾತ್ರಿ ಹಳಿಗಳ ಮೇಲೆ ಮಣ್ಣು ಬಿದ್ದು ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಪ್ರಯಾಣಿಕರು ಪರದಾಡಿದ್ದರು. ಇಂದಿನಿಂದ ಮಧ್ಯಾಹ್ನದ ಯಶವಂತಪುರ- ಕಾರವಾರ ರೈಲು ಈ ಮಾರ್ಗದಲ್ಲಿ ಪುನರಾರಂಭವಾಯಿತು. ಇನ್ನು ಉಳಿದ ರೈಲುಗಳು ಕೂಡಾ ವೇಳಾಪಟ್ಟಿಯ ಹಾಗೇ ಸಂಚರಿಸಲಿದೆ. ಸದ್ಯಕ್ಕೆ ಪ್ರಯಾಣಿಕ ರೈಲುಗಳಿಗೆ ಮಾತ್ರ ಅವಕಾಶ ನೀಡಿದ್ದು, 10 ಕಿ.ಮೀ. ವೇಗದಲ್ಲಿ ಸಂಚರಿಸಲು ಸೂಚಿಸಲಾಗಿದೆ.

ಈ ಬಗ್ಗೆ ನೈರುತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ತಿಳಿಸಿ, ಸ್ಥಳದಲ್ಲಿ ಇನ್ನಷ್ಟು ಕಾಮಗಾರಿ ಆಗಬೇಕಿದ್ದು, ಪೂರ್ಣಗೊಂಡ ನಂತರ ಗೂಡ್ಸ್‌ ರೈಲುಗಳ ಸಂಚಾರ ಆರಂಭಿಸಲಾಗುತ್ತದೆ ಎಂದು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ರಿವಾಲ್ವರ್‌ ಹಿಡಿದು ಚಿನ್ನ ಕಳ್ಳತನಕ್ಕೆ ಬಂದ ಖದೀಮರಿಗೆ ಕೋಲಿನ ಪೆಟ್ಟು ತೋರಿಸಿದ ಮಾಲೀಕ