Select Your Language

Notifications

webdunia
webdunia
webdunia
webdunia

ಮಂಗಳೂರು: ಕಾಸ್ಮೆಟಿಕ್ ಸರ್ಜರಿ ವೇಳೆ ಎಡವಟ್ಟು, ಯುವಕ ಸಾವು

Mangalore Cosmetic Surgery

Sampriya

ಮಂಗಳೂರು , ಬುಧವಾರ, 25 ಸೆಪ್ಟಂಬರ್ 2024 (16:00 IST)
ಮಂಗಳೂರು: ಕಾಸ್ಮೆಟಿಕ್ ಸರ್ಜರಿ ನಂತರ ವಿವಾಹಿತ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ  ನಗರದ ಕಂಕನಾಡಿಯ ಬೆಂದೂರ್ ವೆಲ್ ನಲ್ಲಿರುವ "ಫ್ಲೋಂಟ್" ಕಾಸ್ಮೆಟಿಕ್ ಸರ್ಜರಿ ಮತ್ತು ಹೇರ್ ಟ್ರಾನ್ಸ್ ಪ್ಲಾಂಟ್ ಕ್ಲಿನಿಕ್‌ನಲ್ಲಿ ನಡೆದಿದೆ.

ಯುವಕನ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಪೋಷಕರು ಅಳಲು ವ್ಯಕ್ತಪಡಿಸಿದ್ದಾರೆ.  ಮೃತ ಯುವಕನ್ನು ಉಳ್ಳಾಲದ ಅಕ್ಕರೆಕೆರೆ ನಿವಾಸಿ ಮುಹಮ್ಮದ್ ಮಾಝಿನ್ (32) ಎಂದು ಗುರುತಿಸಲಾಗಿದೆ.

ಮಾಝಿನ್ ತನ್ನ ಎದೆಯ ಎಡಭಾಗದಲ್ಲಿದ್ದ ಸಣ್ಣ ಗುಳ್ಳೆಯನ್ನು ತೆಗೆಸಲು ಶನಿವಾರ ಬೆಳಗ್ಗೆ "ಫ್ಲೋಂಟ್" ಕ್ಲಿನಿಕ್ ಗೆ ತೆರಳಿದ್ದಾನೆ. ಈ ವೇಳೆ ಆತನ ತಾಯಿ ಹಾಗೂ ಪತ್ನಿ ಕೂಡಾ ತೆರಳಿದ್ದರು. ಇನ್ನು ಅರ್ಧ ಗಂಟೆಯಲ್ಲಿ ಮುಗಿಯಬೇಕಿದ್ದ ಶಸ್ತ್ರಚಿಕಿತ್ಸೆ ಸಂಜೆಯವರೆಗೂ ಮುಗಿಸಿಲ್ಲ. ಸಂಶಯಗೊಂಡು ಮಾಝಿನ್ ತಾಯಿ ಹಾಗೂ ಪತ್ನಿ ವೈದ್ಯರ ಬಳಿ ಮಾಝಿನ್ ಆರೋಗ್ಯ ವಿಚಾರಿಸಿದಾಗ, ಆರೋಗ್ಯದಲ್ಲಿ ಏರುಪೇರಾಗಿರುವ ಬಗ್ಗೆ ತಿಳಿಸಿದ್ದಾರೆ. ತಕ್ಷಣ ಅಲ್ಲಿಂದ ಕೋಡಿಯಾಲ್ ಬೈಲ್ ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರೀಕ್ಷಿಸಿದ ವೈದ್ಯರು ಮಾಝಿನ್ ಮೃತಪಟ್ಟಿರುವುದಾಗಿ ಘೋಷಿಸಿದರು.

ಈ ಬಗ್ಗೆ ಶಮನ್ ಇಬ್ರಾಹಿಂ ನೀಡಿದ ದೂರಿನಂತೆ ಕದ್ರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೇರಳ ಟ್ರಕ್ ಡ್ರೈವರ್ ಅರ್ಜುನ್ ಲಾರಿ ಕೊನೆಗೂ ಶಿರೂರಿನಲ್ಲಿ ಪತ್ತೆ: ಅರ್ಜುನ್ ಕತೆ ಏನಾಗಿದೆ ಗೊತ್ತಾ