Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಮುಂದೆ ಏನು ಮಾಡಬೇಕು ಎಂದು ಮಹತ್ವದ ಟಿಪ್ಸ್ ಕೊಟ್ಟ ಸಂತೋಷ್ ಹೆಗ್ಡೆ

ಸಿದ್ದರಾಮಯ್ಯ ಮುಂದೆ ಏನು ಮಾಡಬೇಕು ಎಂದು ಮಹತ್ವದ ಟಿಪ್ಸ್ ಕೊಟ್ಟ ಸಂತೋಷ್ ಹೆಗ್ಡೆ

Sampriya

ಮಂಗಳೂರು , ಬುಧವಾರ, 25 ಸೆಪ್ಟಂಬರ್ 2024 (14:36 IST)
Photo Courtesy X
ಮಂಗಳೂರು: ಸಾರ್ವಜನಿಕರ ಹಿತದೃಷ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸ್ನಾನಕ್ಕೆ ರಾಜೀನಾಮೆ ನೀಡುವುದು ಒಳಿತು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಅಭಿಪ್ರಾಯಪಟ್ಟರು.

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಒಳ್ಳೆಯದು ಎಂದರು.

ಮಂಗಳೂರು ವಿಶ್ವವಿದ್ಯಾನಿಲಯದ ಸಂಸ್ಥಾಪನಾ ದಿನಾಚರಣೆ ಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮ ಮಿತ್ರರ ಜತೆ ಮಾತನಾಡಿ, ಕಾನೂನು ಹೋರಾಟ ಮಾಡಲು ಸಿಎಂ ಸಿದ್ದರಾಮಯ್ಯ ಅವಕಾಶವಿದೆ. ಆದರೆ ಸಾರ್ವಜನಿಕ ದೃಷ್ಟಿಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಕೆಗೆ ಒಳಪಡುವುದು ಉತ್ತಮ ಎಂದರು.

ಸಿದ್ದರಾಮಯ್ಯ ಈ ಹಗರಣದಲ್ಲಿ ತನ್ನ ಕೈವಾಡವಿಲ್ಲ ಎಂದು ಹೇಳುತ್ತಿದ್ದಾಋಎ. ಆದರೆ ಹೈಕೋರ್ಟ್‌ ಆರೋಪಗಳಿಗೆ ಸಂಬಂಧಿಸಿದಂತೆ ಪುರಾವೆ ಇದೆ ಎಂದು ಹೇಳಿದೆ. ಪ್ರಕರಣದ ತನಿಖೆ ಮಾಡುವ ಏಜೆನ್ಸಿ ಯಾವ ನಿರ್ಣಯಕ್ಕೆ ಬರುತ್ತವೆ ಎಂಬುದರ‌ ಮೇಲೆ ಪ್ರಕರಣ ಅಂತ್ಯ ಕಾಣುತ್ತದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಆದೇಶ