Publish Date: Thu, 28 Jul 2022 (16:24 IST)
Updated Date: Thu, 28 Jul 2022 (17:27 IST)
ಶಾಲಾ ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳು ಹಾಕಿದ್ದ ಪ್ಲಾಸ್ಟಿಕ್ ಕುರ್ಚಿಗಳ ಮೇಲೆ ನಡೆಯುತ್ತಾ ಮಳೆ ನೀರನ್ನು ದಾಟಿ ಶಾಲೆಗೆ ತೆರಳುತ್ತಿರುವ ವಿಡಿಯೋ ವೈರಲ್ ಆಗಿದೆ.
ಲಕ್ನೋ: ಉತ್ತರ ಪ್ರದೇಶದಲ್ಲಿ (Uttar Pradesh) ಮಳೆ ಜೋರಾಗಿದೆ. ಶಾಲೆಯ ಸುತ್ತ ಮಳೆ ನೀರು ತುಂಬಿದ್ದರಿಂದ ಶಾಲೆಯೊಳಗೆ ಹೋಗಬೇಕಾದರೆ ಮೊಣಕಾಲಿನವರೆಗೂ ಒದ್ದೆಯಾಗುತ್ತಿತ್ತು.
ಶಾಲಾ ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳು ಹಾಕಿದ್ದ ಪ್ಲಾಸ್ಟಿಕ್ ಕುರ್ಚಿಗಳ ಮೇಲೆ ನಡೆಯುತ್ತಾ ಮಳೆ ನೀರನ್ನು ದಾಟಿ ಶಾಲೆಗೆ ತೆರಳುತ್ತಿರುವ ವಿಡಿಯೋ ವೈರಲ್ ಆಗಿದೆ. ವಿದ್ಯಾರ್ಥಿಗಳನ್ನು ತನ್ನ ಕೆಲಸಕ್ಕೆ ಬಳಕೆ ಮಾಡಿಕೊಂಡ ಅವರನ್ನು ಅಮಾನತು ಮಾಡಲಾಗಿದೆ.
ಮಳೆಗೆ ಶಾಲಾ ಆವರಣ ಜಲಾವೃತವಾಗಿತ್ತು. ಆ ವೇಳೆ ಈ ಘಟನೆ ನಡೆದಿದ್ದು, ಬೇರೊಬ್ಬ ಶಿಕ್ಷಕರು ಅದನ್ನು ವಿಡಿಯೋ ಮಾಡಿಕೊಂಡಿದ್ದರು. ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದ್ದು, ಆ ವಿಡಿಯೋವೇ ಆ ಶಿಕ್ಷಕಿಗೆ ತಿರುಗುಬಾಣವಾಗಿದೆ.