Select Your Language

Notifications

webdunia
webdunia
webdunia
webdunia

ಟಾಟಾ ಗುಡ್​ ಬೈ ಖತಂ, ವಿವಾಹಿತೆ ಎಸ್ಕೇಪ್!!! ಸರ್ಕಾರದ ಬೊಕ್ಕಸಕ್ಕೆ 1 ಕೋಟಿ ಖರ್ಚು ...!

ಟಾಟಾ ಗುಡ್​ ಬೈ ಖತಂ, ವಿವಾಹಿತೆ ಎಸ್ಕೇಪ್!!! ಸರ್ಕಾರದ ಬೊಕ್ಕಸಕ್ಕೆ 1 ಕೋಟಿ ಖರ್ಚು ...!
ಬೆಂಗಳೂರು , ಗುರುವಾರ, 28 ಜುಲೈ 2022 (15:07 IST)
ಟಾಟಾ ಗುಡ್ ಬೈ ಖತಂ, ವಿವಾಹಿತ ಎಸ್ಕೇಪ್!!! ಸರ್ಕಾರದ ಬೊಕ್ಕಸಕ್ಕೆ 1 ಕೋಟಿ ಖರ್ಚು ...!! ಸ್ಟೋರಿ ಇಲ್ಲಿದೆ ನೋಡಿ...!!!
 
ಆರ್ ಕೆ ಬೀಚ್ 2 ದಿನಗಳ ಹಿಂದೆ ನಾಪತ್ತೆಯಾಗಿದ್ದ ವಿವಾಹಿತೆ ಸಾಯಿ ಪ್ರಿಯಾ ಮದುವೆಯಾಗಿದ್ದು, ಪ್ರಕರಣದಲ್ಲಿ ಅನಿರೀಕ್ಷಿತ ತಿರುವು ಸಿಕ್ಕಿದೆ. ಆಕೆ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ!
 
ಆಂಧ್ರಪ್ರದೇಶ: ವಿಶಾಖಪಟ್ಟಣದ ಆರ್‌ಕೆ ಬೀಚ್‌ನಲ್ಲಿ  ಸೋಮವಾರ ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ ಪ್ರಕರಣದ ಸಸ್ಪೆನ್ಸ್ ಅನ್ನು ಪೊಲೀಸರು ಭೇದಿಸಿದ್ದಾರೆ. ಪ್ರಿಯಕರ ರವಿಯೊಂದಿಗೆ ನೆಲ್ಲೂರಿಗೆ ಹೋಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಸಾಯಿಪ್ರಿಯಾ ತನ್ನ ಪ್ರಿಯಕರ ರವಿಯೊಂದಿಗೆ ನೆಲ್ಲೂರಿನಲ್ಲಿ ಇರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಪತಿ ಶ್ರೀನಿವಾಸ್ ತಮ್ಮ ಮೊಬೈಲ್​ ಫೋನ್ ನಲ್ಲಿ ಮೆಸೇಜ್​​ಗಳನ್ನು ಪರಿಶೀಲಿಸುತ್ತಿದ್ದಾಗ ಪಕ್ಕದಲ್ಲಿಯೇ ಇದ್ದ ಸಾಯಿಪ್ರಿಯಾ ನಾಪತ್ತೆಯಾಗಿದ್ದರು. ಪತ್ನಿ ಕಾಣದಿದ್ದಾಗ ಆತಂಕಗೊಂಡ ಪತಿ ಸುತ್ತಮುತ್ತ ಜಾಲಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗದೆ, ಕೊನೆಗೆ ಪೊಲೀಸರಿಗೆ ದೂರು ನೀಡಿದ್ದರು.
ಮದುವೆಗೂ ಮುನ್ನ ರವಿ ಎಂಬಾತನ ಜತೆ ಸಾಯಿ ಪ್ರಿಯಾ ಅಕ್ರಮ ಸಂಬಂಧ ಹೊಂದಿದ್ದಳು. ಈ ಮಧ್ಯೆ, ಶ್ರೀನಿವಾಸ್ ಎಂಬಾತನ ಜೊತೆ ಎರಡನೇ ಮದುವೆ ಆಗಿದ್ದರು. ಮದುವೆ ವಾರ್ಷಿಕೋತ್ಸವದಂದು ಎಲ್ಲಾದರೂ ಸುತ್ತಾಡಿಕೊಂಡು ಬರೋಣ ಎಂದು ಪ್ರೀತಿಯಿಂದ ಕೇಳಿದ್ದ ಮುದ್ದು ಮಡದಿಯ ಮಾತನ್ನು ಅಲ್ಲಗಳೆಯಲಾರದೆ ಪತಿ ಶ್ರೀನಿವಾಸ್ ಕೂಡಲೆ ಸಮ್ಮತಿ ಸೂಚಿಸಿದ್ದರು. ಆದರೆ ಮಡದಿಯ ಯೋಜನೆ ಬೇರೆಯದ್ದೇ ಆಗಿದೆ ಎಂಬುದು ಅಮಾಯಕ ಪತಿ ಶ್ರೀನಿವಾಸ್‌ಗೆ ಆ ಕ್ಷಣ ತಿಳಿದುಬಂದಿಲ್ಲ.
 
ಸಾಯಿಪ್ರಿಯಾ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದಾಳೆ ಎಂದು ಗಾಬರಿಗೊಂಡ ಪತಿ ಹೇಳಿದ ಮಾತನ್ನು ಕೇಳಿ ಸ್ಥಳೀಯ ಅಧಿಕಾರಿಗಳು ಹಾಗೂ ತಕ್ಷಣ ಎಚ್ಚೆತ್ತುಕೊಂಡಿದ್ದರು. ಪತ್ನಿ ಸಾಯಿಪ್ರಿಯಾ ಪತ್ತೆಗೆ ವಿಶೇಷ ತಂಡವನ್ನು ನಿಯೋಜಿಸಲಾಗಿದೆ. ಸ್ಪೀಡ್ ಬೋಟ್‌ಗಳ ಜೊತೆಗೆ ನೌಕಾಪಡೆಯ ಹೆಲಿಕಾಪ್ಟರ್ ಅನ್ನು ಸಹ ಬಳಸಲಾಗಿದೆ.
 
ಸಂಬಂಧಪಟ್ಟ ಸರ್ಕಾರಿ ಇಲಾಖೆಗಳ ಕೆಲ ಅಧಿಕಾರಿಗಳು ತಮ್ಮ ದೈನಂದಿನ ಕೆಲಸ ಪಕ್ಕಕ್ಕಿಟ್ಟು ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಆಕೆಯ ಹುಡುಕಾಟಕ್ಕೆ ಅಂದಾಜು 1 ಕೋಟಿ ರೂಪಾಯಿ ಖರ್ಚಾಗಿದೆ ಎಂದು ವಿಶಾಖಪಟ್ಟಣಂ ಪಾಲಿಕೆ ಉಪಮೇಯರ್ ಜಿಯಾನಿ ಶ್ರೀಧರ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶೀಘ್ರದಲ್ಲೇ ಬರಲಿದೆ ಗೂಗಲ್ ಸಿಗ್ನಲ್ ....!!! ಏನಿದರ ವಿಶೇಷ ..!!!