Publish Date: Tue, 31 Oct 2023 (15:00 IST)
Updated Date: Tue, 31 Oct 2023 (14:05 IST)
ಪ್ರತಿಷ್ಠಿತ ಮಾಲ್ ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ಲೂಲ್ ಮಾಲ್ ಅಧಿಕಾರಿಯಿಂದ ಎಫ್ ಐ ಆರ್ ದಾಖಲಾಯ್ತು .ಘಟನೆ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆದ ವಿಡಿಯೋ ಆಧರಿಸಿ ದೂರು ನೀಡಲಾಗಿದೆ.
ಮಾಲ್ ನ ಎರಡನೇ ಮಹಡಿಯಲ್ಲಿ 29ರ ಸಂಜೆ 6:30 ರ ಸುಮಾರಿಗೆ ಘಟನೆ ನಡೆದಿದೆ.ಲೈಂಗಿಕವಾಗಿ ಪ್ರಸ್ತಾಪಿಸುವ ಸಲುವಾಗಿ ಮಹಿಳೆಯ ಹಿಂಬದಿಯಲ್ಲಿ ಬಂದು ಮಹಿಳೆಯ ಹಿಂಬದಿಯ ದೇಹ ಸ್ಪರ್ಶಿಸಿರುವುದು.ಇದನ್ನು ಮತ್ತೊಬ್ಬ ಗ್ರಾಹಕರು ವಿಡಿಯೋ ಚಿತ್ರಿಕರಿಸಿದ್ದಾರೆ.ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗಿದ್ದು, ವಿಚಾರ ಸುದ್ದಿ ವಾಹಿನಿಗಳಿಂದ ಗೊತ್ತಾಗಿದೆ.ಹೀಗಾಗಿ ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ಸಿಬ್ಬಂದಿ ದೂರು ನೀಡಿದ್ದಾರೆ.ದೂರು ಹಿನ್ನೆಲೆ ಮಾಗಡಿರಸ್ತೆ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು,ಮಾಗಡಿ ರಸ್ತೆ ಪೊಲೀಸರಿಂದ ತನಿಖೆ ಶುರುವಾಗಿದೆ.