Select Your Language

Notifications

webdunia
webdunia
webdunia
webdunia

ಎಫ್ ಐ ಆರ್ ಇಲ್ಲದೆ ವಕೀಲರನ್ನ ಲಾಕಪ್ ಗೆ ಹಾಕಿದ ವೀಡಿಯೊ ವೈರಲ್- ಇಬ್ಬರು ಪೊಲೀಸ್ ಕಾನ್ ಸ್ಟೇಬಲ್ ಅಮಾನತು

two police constables
bangalore , ಶನಿವಾರ, 9 ಸೆಪ್ಟಂಬರ್ 2023 (15:27 IST)
ಎಫ್ ಐ ಆರ್ ಇಲ್ಲದೇ ವಕೀಲರನ್ನ ಲಾಕಪ್ ಗೆ ಹಾಕಿದ ವೀಡಿಯೊ ವೈರಲ್ ಹಿನ್ನೆಲೆ ಇಬ್ಬರು ಪೊಲೀಸ್ ಕಾನ್ ಸ್ಟೇಬಲ್ ಗಳನ್ನ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.ರಾಜಾನುಕುಂಟೆ ಪೊಲೀಸ್ ಠಾಣೆಯ ಕಿರಣ್ ಹಾಗು ಮೋಹನ್ ಕುಮಾರ್ ರನ್ನ ಅಮಾನತುಗೊಳಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ ಪಿ ಮಲ್ಲಿಕಾರ್ಜುನ್ ಬಾಲದಂಡಿಯವರಿಂದ ಆದೇಶ ಮಾಡಿದ್ದಾರೆ.
 
ಚಂದ್ರಶೇಖರ್ ಹಾಗು ಮಂಜುನಾಥ್ ಎಂಬುವರು ಗಲಾಟೆ ಸಂಬಂಧ ಕೇಸ್ ವೊಂದರಲ್ಲಿ ಸ್ಟೇಷನ್ ಗೆ ಹೋಗಿದ್ರು .ಈ ವೇಳೆ ಇನ್ಸ್ ಪೆಕ್ಟರ್ ಜೊತೆ ಜೋರು ಧ್ವನಿಯಲ್ಲಿ ಮಾತನಾಡ್ತಿದ್ರು .ಆಗ ಇಬ್ಬರನ್ನೂ ಇನ್ಸ್ ಪೆಕ್ಟರ್ ಚೇಂಬರ್ ನಿಂದ ತಳ್ಳಿಕೊಂಡು ಬಂದು ಸಿಬ್ಬಂದಿಗಳು ಲಾಕಪ್ ಗೆ ಹಾಕಿದ್ದಾರೆ.ನಾನು ಲಾಯರ್ ಇದ್ದೇನೆ ಅಂದ್ರೂ ಲಾಕಪ್ ಗೆ ಹಾಕಿದ್ರು ಇದೆಲ್ಲಾ ದೃಶ್ಯಗಳು ಠಾಣೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ವು .ವಕೀಲರನ್ನ ಲಾಕಪ್ ನಲ್ಲಿ ಇರಿಸಿದ್ದಾರೆ ಅನ್ನೊ ವೀಡಿಯೊ ವೈರಲ್ ಆಗಿತ್ತು.ಪ್ರಕರಣ ಸಂಬಂಧ ಇಬ್ಬರು ಪೊಲೀಸ್ ಸಿಬ್ಬಂಧಿಗಳನ್ನ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಸೇರುವ ಬಗ್ಗೆ ಯೋಚಿಸಿಲ್ಲ-ಮಾಜಿ ಸಚಿವ ವಿ.ಸೋಮಣ್ಣ