Publish Date: Mon, 03 Apr 2023 (15:27 IST)
Updated Date: Mon, 03 Apr 2023 (14:28 IST)
ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಮೇಲೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.ಚುನಾವಣಾ ಅಧಿಕಾರಿ ಲಕ್ಷ್ಮಣ್ ನೀಡಿದ ದೂರಿನನ್ವಯ ಎಫ್ಐಆರ್ ದಾಖಲಾಗಿದ್ದು,ಗಾಂಧಿನಗರದ ಟೆಕೆಟ್ ಆಕಾಂಕ್ಷಿಯಾಗಿರುವ ಕೃಷ್ಣಯ್ಯ ಶೆಟ್ಟಿ ಗಾಂಧಿನಗರ ಕ್ಷೇತ್ರದ ಹೆಸರು ಮತ್ತು ಕೃಷ್ಣಯ್ಯ ಶೆಟ್ಟಿ ಹೆಸರಲ್ಲಿ ಪುಡ್ ಕಿಟ್ ತಯಾರಿ ಮಾಡಲಾಗ್ತಿತ್ತು.ಈ ವೇಳೆ ಖಚಿತ ಮಾಹಿತಿ ಆಧರಿಸಿ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ದಾಳಿ ಮಾಡಿದ್ದಾರೆ.
ಅಕ್ಕಿ, ಬೆಳೆ, ಬೆಲ್ಲ, ಡ್ರೈಫ್ರೂಟ್ಸ್, ಆಡುಗೆ ಎಣ್ಣೆ ಸೇರಿದಂತೆ ಗೃಹ ಬಳಕೆ ದಿನಸಿ ವಶಕ್ಕೆ ಪಡೆಯಲಾಗಿದೆ.ಅಲ್ಲದೆ ಸುಮಾರು ಏಳೆಂಟು ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಪತ್ತೆಯಾಗಿತ್ತು.ಸದ್ಯ ಪ್ರಕರಣ ದಾಖಲಿಸಿಕೊಂಡು ಕೃಷ್ಣಯ್ಯ ಶೆಟ್ಟಿಗೆ ಪೊಲೀಸರು ನೊಟೀಸ್ ನೀಡಲು ಮುಂದಾಗಿದ್ದಾರೆ.ಇನ್ನೆರಡು ದಿನದಲ್ಲಿ ನೋಟಿಸ್ ನೀಡಿ ಮಲ್ಲೇಶ್ವರಂ ಪೊಲೀಸರು ಹೇಳಿಕೆ ದಾಖಲಿಸಲ್ಲಿದ್ದಾರೆ.