Select Your Language

Notifications

webdunia
webdunia
webdunia
webdunia

ಸೋಲಾರ್ ವಿದ್ಯುತ್ ತಯಾರಿಕೆ ಕಂಪನಿಯಿಂದ ರೈತರ ಜಮೀನು ಕಬಳಿಕೆ?

ಸೋಲಾರ್ ವಿದ್ಯುತ್ ತಯಾರಿಕೆ ಕಂಪನಿಯಿಂದ ರೈತರ ಜಮೀನು ಕಬಳಿಕೆ?
ಕೊಪ್ಪಳ , ಸೋಮವಾರ, 2 ಏಪ್ರಿಲ್ 2018 (14:41 IST)
ಸೋಲಾರ್ ವಿದ್ಯುತ್ ತಯಾರಿಸುವ ನೆಪದಲ್ಲಿ ರೈತರ ಜಮೀನನ್ನು ಅಕ್ರಮವಾಗಿ ಕಬಳಿಸುವ ಭೂಮಾಫಿಯಾ ಕೊಪ್ಪಳದಲ್ಲಿ ತಲೆ ಎತ್ತಿದೆ. 
ಮುಖ್ಯಮಂತ್ರಿ ಸಿದ್ದರಾಮಯ್ಯ ಇಂಧನ ಸಚಿವ ಡಿಕೆ ಶಿವಕುಮಾರ ಅವರ ಒತ್ತಡದಿಂದ ರೈತರ ಜಮೀನನ್ನು ಬಲವಂತಾಗಿ ಕಸಿದುಕೊಂಡು ಅನ್ನದಾತರಿಗೆ ಅನ್ಯಾಯ ಮಾಡಿದ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಗುಮಗೇರಿ , ಕಂದಕೂರು ಗ್ರಾದಲ್ಲಿ ನಡೆದಿದೆ. 
 
ನಾವು ಜಮೀನು ಮಾರುವುದಿಲ್ಲ ನಮಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ನಮಗೆ ರಕ್ಷಣೆ ಕೋಡಿ ಎಂದು ರೈತರು ಪೊಲಿಸರ ಮೋರೆ ಹೋಗಿದ್ದರು.
 
ಕಾನೂನು ಪಾಲಿಸ ಬೇಕಾದ ಪೊಲಿಸರು ಪ್ರಭಾವಿಗಳ ಒತ್ತಡಕ್ಕೆ ಮಣಿದು ಕೋರ್ಟ ಆದೇಶವನ್ನು ಉಲ್ಲಂಘನೆ ಮಾಡಿದ್ದಾರೆ ಇತ್ತ ರೈತರು ತಾವು ಪ್ರಾಣ ಬೀಡುತ್ತೇವೆ  ಜಮೀನು ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದು ಚುನಾವಣೆ ನೆಪದಲ್ಲಿ ಅಧಿಕಾರಿಗಳು ರೈತರಿಗೆ ಮೋಸಮಾಡುತ್ತಿದ್ದಾರೆ. ಪ್ರಭಾವಿಗಳ ಒತ್ತಡಕ್ಕೆ ಅಧಿಕಾರಿಗಳು ಮಣಿದಿದ್ದಾರೆ. ರೈತರು ರೊಚ್ಚಿಗೆದ್ದು ಸೋಲಾರ ಕಂಪನಿಯನ್ನು ಓಡಿಸಲು ಮುಂದಾದರು ಆಶ್ಚರ್ಯ ಪಡಬೇಕಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಜ್ವಲ್ ರೇವಣ್ಣ ಸ್ಪರ್ಧೆ ಕನಸಿಗೆ ತಣ್ಣೀರು!