Publish Date: Mon, 02 Apr 2018 (12:17 IST)
Updated Date: Mon, 02 Apr 2018 (12:19 IST)
ಬೆಂಗಳೂರು: ಚುನಾವಣಾ ಪ್ರಚಾರದ ವೇಳೆ ಜೆಡಿಎಸ್ ನ್ನು ಜನತಾ ದಳ ಸಂಘಪರಿವಾರ ಎಂದು ಟೀಕಿಸಿದ ರಾಹುಲ್ ಗಾಂಧಿ ಮೇಲೆ ತನಗೇನೂ ಅಸಮಾಧಾನವಿಲ್ಲ ಎಂದು ಎಚ್ ಡಿ ದೇವೇಗೌಡರು ಹೇಳಿದ್ದಾರೆ.
ರಾಹುಲ್ ರಾಜಕೀಯವಾಗಿ ಇನ್ನೂ ಬೆಳೆಯಬೇಕು. ಅವರಿಗೆ ಇನ್ನೂ ಅರಿವು ಸಾಲದು. ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷನ ಬಾಯಲ್ಲಿ ಇಂತಹ ಮಾತು ಹೇಳಿಸಬಾರದು ಎಂದು ದೇವೇಗೌಡರು ಹೇಳಿದ್ದಾರೆ.
ಚುನಾವಣಾ ಪೂರ್ವ ಮೈತ್ರಿಗೆ ಸ್ನೇಹದ ಹಸ್ತ ಚಾಚಿದ್ದ ದೇವೇಗೌಡರು ಈ ರೀತಿ ರಾಹುಲ್ ಗಾಂಧಿ ಮೇಲೆ ಮೃದು ಧೋರಣೆ ತಾಳಿರುವುದು ನೋಡಿದರೆ ಚುನಾವಣೆ ನಂತರವೂ ಅಗತ್ಯ ಬಂದರೆ ಕಾಂಗ್ರೆಸ್ ಪರ ನಿಲ್ಲಲು ಅವರು ನಿರ್ಧರಿಸಿರಬಹುದು ಎಂಬ ಸಂಶಯ ಮೂಡುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ