Publish Date: Mon, 02 Apr 2018 (11:51 IST)
Updated Date: Mon, 02 Apr 2018 (11:56 IST)
ಬೆಂಗಳೂರು: ಏಪ್ರಿಲ್ 30 ರೊಳಗಾಗಿ ರಾಜ್ಯ ರಾಜಕೀಯದಲ್ಲಿ ವಿಶೇಷ ವಿದ್ಯಮಾನಗಳು ನಡೆಯಲಿವೆ ನೋಡುತ್ತಿರಿ ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು ಕುತೂಹಲ ಮೂಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ನಮ್ಮ ಇದು ನನ್ನ ರಾಜಕೀಯ ಹೋರಾಟದಲ್ಲಿಯೇ ವಿಶೇಷ ಸಂದರ್ಭ. 30 ರೊಳಗಾಗಿ ಕೆಲವು ಘಟನೆಗಳು ನಡೆಯಲಿವೆ. ನಮ್ಮ ಪಕ್ಷದಿಂದಲೇ ಅಧಿಕಾರ ಅನುಭವಿಸಿ ಹೋದವರು ಇಂದು ನಮಗೇ ದ್ರೋಹ ಬಗೆದಿದ್ದಾರೆ. ಅವರ ಬಗ್ಗೆ ನಾನು ಮಾತನಾಡಲ್ಲ’ ಎಂದು ದೇವೇಗೌಡರು ಕುತೂಹಲ ಮೂಡಿಸುವ ಹೇಳಿಕೆ ನೀಡಿದ್ದಾರೆ.
ಇತ್ತ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿಕೊಂಡಿರುವ ಜಮೀರ್ ಅಹಮ್ಮದ್ ಗೆ ಸೆಡ್ಡು ಹೊಡೆಯಲು ಜೆಡಿಎಸ್ ಮುಸ್ಲಿಂ ಸಮುದಾಯದವರೇ ಆದ ಅಲ್ತಾಫ್ ರನ್ನು ಆರಿಸಿಕೊಂಡಿದೆ. ಒಂದು ಕಾಲದಲ್ಲಿ ಜಮೀರ್ ಅಹಮ್ಮದ್ ಗೆ ಜತೆಯಾಗಿದ್ದ ಅಲ್ತಾಫ್ ಇದೀಗ ಎದುರಾಳಿಯಾಗಲಿದ್ದಾರೆ. ಸದ್ಯದಲ್ಲೇ ಜಮೀರ್ ಮಾಡಿರುವ ಅಕ್ರಮಗಳನ್ನು ಬಯಲಿಗೆಳೆಯುತ್ತೇನೆ ಎಂದು ಅಲ್ತಾಫ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಬಿವೈ ವಿಜಯೇಂದ್ರ ಬಗ್ಗೆ ಪ್ರಶ್ನೆಯನ್ನೇ ಕೇಳಬೇಡಿ