Publish Date: Mon, 02 Apr 2018 (09:08 IST)
Updated Date: Mon, 02 Apr 2018 (09:09 IST)
ಬೆಂಗಳೂರು: ಮುಂಬೈ ಕರ್ನಾಟಕ ಭಾಗದಲ್ಲಿ ಅಮಿತ್ ಶಾ ನಡೆಸಬೇಕಿದ್ದ ಪ್ರವಾಸ ದಿಡೀರ್ ರದ್ದಾಗಿದೆ. ಸಂಸತ್ ಕಲಾಪದಲ್ಲಿ ಅನಿವಾರ್ಯವಾಗಿ ಪಾಲ್ಗೊಳ್ಳಬೇಕಿರುವುದರಿಂದ ಶಾ ಪ್ರವಾಸ ರದ್ದುಪಡಿಸಿದ್ದಾರೆ.
ಸಂಸತ್ತಿನಲ್ಲಿಂದು ಸಿಜೆಇ ವಿರುದ್ಧ ಮಹಾಭಿಯೋಗ ಮಂಡನೆ ಹಿನ್ನಲೆಯಲ್ಲಿ ಸಂಸತ್ತಿನ ಕಲಾಪದಲ್ಲಿ ಪಾಲ್ಗೊಳ್ಳಲು ಅಮಿತ್ ಶಾ ನವದೆಹಲಿಗೆ ವಾಪಸಾಗಿದ್ದಾರೆ. ಇದರಿಂದಾಗಿ ಅಮಿತ್ ಶಾ ಬರುವಿಕೆಗಾಗಿ ಕಾಯುತ್ತಿದ್ದ ಮುಂಬೈ ಕರ್ನಾಟಕ ಭಾಗದ ಬಿಜೆಪಿ ಕಾರ್ಯಕರ್ತರಿಗೆ ನಿರಾಸೆಯಾಗಿದೆ.
ಇಂದಿನ ಕಾರ್ಯಕ್ರಮಗಳನ್ನು ಮುಂದೂಡಲಾಗಿದ್ದು, ಏಪ್ರಿಲ್ 12, 13 ರಂದು ಆಯೋಜಿಸಲಾಗುತ್ತಿದೆ. ಕಾಂಗ್ರೆಸ್ ಪ್ರಾಬಲ್ಯವಿರುವ ಈ ಭಾಗದಲ್ಲಿ ಅಮಿತ್ ಶಾ ಆಗಮನ ಪಕ್ಷಕ್ಕೆ ಹೊಸ ಚೈತನ್ಯ ನೀಡಬಹುದು ಎಂಬ ನಿರೀಕ್ಷೆಯಲ್ಲಿ ಬಿಜೆಪಿ ಕಾರ್ಯಕರ್ತರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ