Select Your Language

Notifications

webdunia
webdunia
webdunia
webdunia

ಸೂರ್ಯನ ಕುರಿತ ಸಂಶೋಧನೆಗೆ ನಾಸಾ ಸಜ್ಜು

ಸೂರ್ಯನ ಕುರಿತ ಸಂಶೋಧನೆಗೆ ನಾಸಾ ಸಜ್ಜು
ನಾಸಾ , ಶುಕ್ರವಾರ, 2 ಜೂನ್ 2017 (08:45 IST)
ನಾಸಾ:ಸೂರ್ಯನ ರಹಸ್ಯ ಭೇದಿಸಲು ನಾಸಾ ಹೊಸ ಯೋಜನೆ ರೂಪಿಸಿಡ್ಡೂ, 2018ರಲ್ಲಿ ಪಾರ್ಕರ್‌ ಸೋಲಾರ್‌ ಪ್ರೋಬ್‌'  ಎಂಬ ಉಪಗ್ರಹ ನೌಕೆಯನ್ನು ಉಡಾವಣೆ ಮಾಡಲು ಸಜ್ಜುಗೊಂಡಿದೆ.
 
ಕಳೆದ 6 ದಶಕಗಳಿಂದ ಸೂರ್ಯನ ಕುರಿತಾದ ವಿಜ್ಞಾನಿಗಳ ಪ್ರಶ್ನೆಗಳಿಗೆ ಇದರಿಂದ ಉತ್ತರ ಸಿಗಲಿದೆ ಎಂದು ಹೇಳಲಾಗಿದೆ. 2018 ರಲ್ಲಿ ಸೂರ್ಯನ ಸಂಶೋಧನೆಗೆ ಬಾಹ್ಯಾಕಾಶ ನೌಕೆಯೊಂದನ್ನು ನಾಸಾ ಕಳಿಸಲಿದ್ದು, ಇದಕ್ಕೆ ಸೌರಭೌತ ವಿಜ್ಞಾನಿ ಈಗೆನ್‌ ಪಾರ್ಕರ್‌ ಅವರ ಹೆಸರನ್ನಿರಿಸಿದೆ. "ಪಾರ್ಕರ್‌ ಸೋಲಾರ್‌ ಪ್ರೋಬ್‌' ಹೆಸರಿನ ಈ ಯೋಜನೆ ಸೂರ್ಯನ ಕುರಿತ ಹಲವು ಪ್ರಶ್ನೆಗಳಿಗೆ ಉತ್ತರ ಕೊಡುವ ನಿರೀಕ್ಷೆಯಿದೆ.
 
2018ರ ಜುಲೈ 31ರಂದು ನಾಸಾದ ಕೆನೆಡಿ ಬಾಹ್ಯಾಕಾಶ ಕೇಂದ್ರದಿಂದ ನೌಕೆ ಉಡಾವಣೆಗೊಳ್ಳಲಿದೆ. ಈವರೆಗೂ ಕಾಣದ ವಲಯದಲ್ಲಿ ನೌಕೆ ಶೋಧನಾ ಕಾರ್ಯ ನಡೆಸಲಿದೆ ಎಂದು ಪ್ರೊ.ಪಾರ್ಕರ್‌ ತಿಳಿಸಿದ್ದಾರೆ.ಸೂರ್ಯ ತನ್ನ ಮೇಲ್ಭಾಕ್ಕಿಂತಲೂ ಪ್ರಭಾವಲಯದಲ್ಲಿ ಹೆಚ್ಚು ಉಷ್ಣತೆ, ಶಾಖ ಹೊಂದಿರುವ ಹಿಂದಿನ ರಹಸ್ಯವನ್ನು ಬೇಧಿಸಲು ಸಾಧ್ಯವಾಗಲಿದೆ. 4.5 ಇಂಚು ಕಾರ್ಬನ್‌ ಸಂಯೋಜಿತ ರಕ್ಷಣಾ ಕವಚವನ್ನು ಪಾರ್ಕರ್‌ ನೌಕೆ ಹೊಂದಿರಲಿದ್ದು ಅತಿ ತಾಪವನ್ನು ತಡೆದು ಶೋಧನಾಕಾರ್ಯ ನಡೆಸಲಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪ ಜೀವನ ಚರಿತ್ರೆ ಕುರಿತಾಗಿಯೂ ಬರಲಿದೆ ಸಿನಿಮಾ..?