Publish Date: Mon, 02 Apr 2018 (12:31 IST)
Updated Date: Mon, 02 Apr 2018 (12:33 IST)
ಬೆಂಗಳೂರು: ಈ ವಿಧಾನಸಭೆ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರದ ಟಿಕೆಟ್ ಗಾಗಿ ತೀವ್ರ ತೆರೆಮರೆಯ ಗುದ್ದಾಟ ನಡೆಸಿದ್ದ ಜೆಡಿಎಸ್ ವರಿಷ್ಠ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಕನಸು ಭಗ್ನಗೊಂಡಿದೆ ಎನ್ನಲಾಗಿದೆ.
ಆರ್ ಆರ್ ನಗರದ ಟಿಕೆಟ್ ಗಾಗಿ ಪ್ರಜ್ವಲ್ ರೇವಣ್ಣ ತೀವ್ರ ಕಸರತ್ತು ನಡೆಸಿದ್ದರು. ಒಂದೊಮ್ಮೆ ಜೆಡಿಎಸ್ ವಿರುದ್ಧವೇ ಬಹಿರಂಗ ಹೇಳಿಕೆ ನೀಡಿದ್ದರು. ಕೊನೆಗೆ ದೇವೇಗೌಡರು ಬುದ್ಧಿ ಹೇಳಿದ್ದರಿಂದ ಸುಮ್ಮನಾಗಿದ್ದರು. ಚಿಕ್ಕಪ್ಪ ಕುಮಾರಸ್ವಾಮಿ ಪ್ರಜ್ವಲ್ ನಡುವೆ ಅಸಮಾಧಾನವಿದೆ ಎಂದೂ ಹೇಳಲಾಗಿತ್ತು.
ಹಾಗಿದ್ದರೂ ಆರ್ ಆರ್ ನಗರದಲ್ಲಿ ಸ್ಪರ್ಧಿಸುವ ಪ್ರಜ್ವಲ್ ಕನಸು ಮಾಯವಾಗಿರಲಿಲ್ಲ. ಆದರೆ ಇದೀಗ ಆರ್ ಆರ್ ನಗರಕ್ಕೆ ಕುಮಾರಸ್ವಾಮಿ ಬೇರೊಬ್ಬರ ಅಭ್ಯರ್ಥಿಯ ಹೆಸರು ಫೈನಲ್ ಮಾಡಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಪ್ರಜ್ವಲ್ ಕನಸು ಭಗ್ನಗೊಂಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ