ಬೆಂಗಳೂರು: ಪತ್ನಿಯಿಂದಲೇ ಬರ್ಬರವಾಗಿ ಹತ್ಯೆಗೀಡಾಗಿದ್ದ ನಿವೃತ್ತ ಡಿಜಿಪಿ ಓಂ ಪ್ರಕಾಶ್ ಪುತ್ರಿ ಕೃತಿಕಾ ಮನೆ ಸಮೀಪದ ನಂದಿನಿ ಪಾರ್ಲರ್ ನಲ್ಲಿ ದಾಂಧಲೆ ನಡೆಸಿರುವುದಾಗಿ ವರದಿಯಾಗಿದೆ.
ಕೃತಿಕಾ ಈಗಾಗಲೇ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದರು ಎನ್ನಲಾಗಿತ್ತು. ತಂದೆ ಕೊಲೆಗೀಡಾದ ಸಂದರ್ಭದಲ್ಲಿ ಆಕೆಯೂ ಮನೆಯಲ್ಲಿಯೇ ಇದ್ದಳು. ಆಕೆ ಮಾನಸಿಕವಾಗಿ ಕುಗ್ಗಿ ಹೋಗಿದ್ದರಿಂದ ಪೊಲೀಸರು ಒಮ್ಮೆ ನಿಮ್ಹಾನ್ಸ್ ಆಸ್ಪತ್ರೆಗೂ ಕರೆದೊಯ್ದು ಚಿಕಿತ್ಸೆ ನೀಡಿದ್ದರು.
ಕೃತಿಕಾ ಮನೆಯಲ್ಲಿ ಏಕಾಂಗಿಯಾಗಿ ವಾಸ ಮಾಡುತ್ತಿದ್ದಾರೆ. ಇದೀಗ ಮನೆ ಸಮೀಪದ ನಂದಿನಿ ಪಾರ್ಲರ್ ಬಳಿ ಏಕಾಂಗಿಯಾಗಿ ನಿಂತು ದಿಟ್ಟಿಸಿ ನೋಡುತ್ತಿದ್ದರು. ಇದನ್ನು ಗಮನಿಸಿ ಅಂಗಡಿ ಮಾಲಿಕ ಏನಾಯ್ತು ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಸಿಟ್ಟಿಗೆದ್ದ ಆಕೆ ಅಂಗಡಿಯಲ್ಲಿರುವ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿ ಮಾಲಿಕನಿಗೂ ಹಲ್ಲೆ ನಡೆಸಿ ದಾಂಧಲೆ ಎಬ್ಬಿಸಿದ್ದಾರೆ.
ಆಕೆಯ ವರ್ತನೆಗೆ ಶಾಕ್ ಆದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಪೊಲೀಸರು ಬರುತ್ತಿದ್ದಂತೇ ಆಕೆ ಜಾಗ ಖಾಲಿ ಮಾಡಿದ್ದಾಳೆ ಎನ್ನಲಾಗಿದೆ.