Select Your Language

Notifications

webdunia
webdunia
webdunia
webdunia

DGP Om Prakash murder: ನಿವೃತ್ತ ಡಿಜಿಪಿ ಓಂ ಪ್ರಕಾಶ್ ಪತ್ನಿಗಿತ್ತು ಈ ಮಾನಸಿಕ ಕಾಯಿಲೆ

Om Prakash

Krishnaveni K

ಬೆಂಗಳೂರು , ಸೋಮವಾರ, 21 ಏಪ್ರಿಲ್ 2025 (20:22 IST)
ಬೆಂಗಳೂರು: ಕರ್ನಾಟಕ ನಿವೃತ್ತ ಡಿಜಿಪಿ ಓಂ ಪ್ರಕಾಶ್ ಕಗ್ಗೊಲೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಸ್ವತಃ ಪತ್ನಿ ಪಲ್ಲವಿಯೇ ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಇದೀಗ ಪತ್ನಿ ಪಲ್ಲವಿಗೆ ಮಾನಸಿಕ ಕಾಯಿಲೆಯೊಂದು ಇತ್ತು ಎಂಬ ಮಾಹಿತಿ ಹೊರಬಿದ್ದಿದೆ. ಅದೇನದು ಇಲ್ಲಿ ನೋಡಿ.

ಓಂ ಪ್ರಕಾಶ್ ತಮಗೆ ಮತ್ತು ಮಗಳಿಗೆ ಗನ್ ತೋರಿಸಿ ಶೂಟ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಪಲ್ಲವಿ ಈಗಾಗಲೇ ಐಪಿಎಸ್ ಅಧಿಕಾರಿಗಳ ಫ್ಯಾಮಿಲಿ ಗ್ರೂಪ್ ನಲ್ಲಿ ಮೆಸೇಜ್ ಮಾಡಿದ್ದರಂತೆ. ಕೃತ್ಯ ನಡೆದ ದಿನವೂ ಓಂ ಪ್ರಕಾಶ್ ತಮ್ಮ ಮೇಲೆ ಗುಂಡು ಹಾರಿಸುವುದಾಗಿ ಗನ್ ತೋರಿಸಿ ಬೆದರಿಸಿದ್ದರು. ನಮ್ಮ ಆತ್ಮರಕ್ಷಣೆಗಾಗಿ ಚಾಕುವಿನಿಂದ ಇರಿದೆ ಎಂದು ಪಲ್ಲವಿ ಪೊಲೀಸರ ಬಳಿ ಹೇಳಿಕೊಂಡಿದ್ದರು.

ಆದರೆ ಪಲ್ಲವಿಗೆ ಸ್ಕೀಝೋಫ್ರೀನಿಯಾ ಎಂಬ ಮಾನಸಿಕ ಕಾಯಿಲೆ ಇದೆ ಎಂಬ ಅಂಶ ಹೊರಬಿದ್ದಿದೆ. ಈ ಕಾಯಿಲೆ ಇರುವ ವ್ಯಕ್ತಿ ಇಲ್ಲದ ವಿಚಾರವನ್ನು ಇದೆ ಎಂದು ಊಹೆ ಮಾಡಿಕೊಳ್ಳುತ್ತಾರೆ. ಕಲ್ಪನೆಯ ವ್ಯಕ್ತಿಯೊಂದಿಗೆ ಮಾತನಾಡುವುದು ಮಾಡುತ್ತಾರೆ. ಇದೇ ಕಾರಣಕ್ಕೆ ಓಂ ಪ್ರಕಾಶ್ ಬಗ್ಗೆಯೂ ಆಕೆ ಇಲ್ಲಸಲ್ಲದ ವಿಚಾರವನ್ನು ಮನಸ್ಸಿನಲ್ಲಿ ತುಂಬಿಕೊಂಡಿದ್ದಿರಬಹುದು ಎನ್ನಲಾಗುತ್ತಿದೆ. ಈಗ ಪೊಲೀಸರು ತನಿಖೆ ನಡೆಸುತ್ತಿದ್ದು ಮತ್ತಷ್ಟು ಸತ್ಯಗಳು ಹೊರಬೀಳುವ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಲಿಬಾಬ ಮತ್ತು 40 ಕಳ್ಳರ ಕಥೆಯ ತದ್ರೂಪವೇ ಸಿದ್ದರಾಮಯ್ಯರ ತಂಡ: ಡಿ.ವಿ. ಸದಾನಂದಗೌಡ