ಬೆಂಗಳೂರು: ನಿವೃತ್ತ ಡಿಜಿಪಿ ಓಂ ಪ್ರಕಾಶ್ ಅವರ ಹತ್ಯೆಗೆ ಪ್ಲ್ಯಾನ್ ನಡೆದಿದ್ದು ಈಗಲ್ಲ. ಅಮ್ಮ, ಮಗಳು ಈ ಮೊದಲೇ ಪ್ಲ್ಯಾನ್ ಮಾಡಿದ್ದಾರೆ ಎಂಬುದು ಈಗ ರಿವೀಲ್ ಆಗಿದೆ.
ಓಂ ಪ್ರಕಾಶ್ ಹತ್ಯೆಗೆ ಒಂದು ವಾರದಿಂದ ಪ್ಲ್ಯಾನ್ ನಡೆದಿತ್ತು. ಇದಕ್ಕಾಗಿ ತಂಗಿ ಜೊತೆಗಿದ್ದ ಅವರನ್ನು ಬಲವಂತವಾಗಿ ಅಮ್ಮ-ಮಗಳು ಕರೆಸಿದ್ದರು. ಮನೆಗೆ ಬಂದ ಮೇಲೆಯೂ ಜಗಳ ತಾರಕಕ್ಕೇರಿತ್ತು. ಸ್ವತಃ ಮಗಳು ಕೃತಿ ಅತ್ತೆ ಮನೆಗೆ ಹೋಗಿ ತಂದೆಯನ್ನು ಪೀಡಿಸಿ ಕರೆತಂದಿದ್ದಳು.
ಪ್ಲ್ಯಾನ್ ನಂತೇ ಭಾನುವಾರವೂ ಗಲಾಟೆ ನಡೆದಿದೆ. ಗಲಾಟೆ ಬಳಿಕ ಓಂ ಪ್ರಕಾಶ್ ಮೀನು ತರಿಸಿಕೊಂಡು ಊಟಕ್ಕೆ ಕೂತಿದ್ದರು. ಊಟ ಮಾಡುತ್ತಿರುವಾಗಲೇ ಅಮ್ಮ-ಮಗಳು ಖಾರದಪುಡಿ ಎರಚಿ, ಕೈ ಕಾಲು ಕಟ್ಟಿ ಹಾಕಿ ಚಾಕುವಿನಿಂದ ದಾಳಿ ಮಾಡಿದ್ದಾರೆ ಎಂಬುದು ಈಗ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ನಿನ್ನೆ ಪೊಲೀಸರು ಮೆಡಿಕಲ್ ಪರೀಕ್ಷೆಗೆ ಓಂ ಪ್ರಕಾಶ್ ಪತ್ನಿ ಪಲ್ಲವಿಯನ್ನು ಜಯನಗರ ಸರ್ಕಾರೀ ಆಸ್ಪತ್ರೆಗೆ ಕರೆತಂದಾಗ ಗೃಹಹಿಂಸೆ ಪ್ರಕರಣ ಎಂದು ಮಾಧ್ಯಮಗಳ ಮುಂದೆ ಪದೇ ಪದೇ ಹೇಳಿಕೆ ಕೊಟ್ಟಿದ್ದಾರೆ.