Select Your Language

Notifications

webdunia
webdunia
webdunia
webdunia

Karnataka By Election Result: ಬಿಜೆಪಿ ಸೋಲಿಗೆ ಈ ವ್ಯಕ್ತಿನೇ ಕಾರಣ ಎಂದ ಬಸನಗೌಡ ಪಾಟೀಲ್‌

Karnataka By Election Result, MLA Basanagouda Patil Yatnal, BJP President BY Vijayendra

Sampriya

ಚಿಕ್ಕೋಡಿ , ಶನಿವಾರ, 23 ನವೆಂಬರ್ 2024 (15:28 IST)
ಚಿಕ್ಕೋಡಿ: ಕರ್ನಾಟಕದಲ್ಲಿ ನಡೆದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಲು ಯಡಿಯೂರಪ್ಪ ಪುತ್ರ ವ್ಯಾಮೋಹವೇ ಕಾರಣ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಆರೋಪಿಸಿದರು.

ಈ ಬಗ್ಗೆ ಖಾಸಗಿ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದ  ಅವರು, ಮುಂದಿನ ದಿನಗಳಾದರೂ ಹೈಕಮಾಂಡ್ ಈ ವಿಚಾರವಾಗಿ ಗಂಭೀರ ಚರ್ಚೆ ಮಾಡಬೇಕು.  ಈ ಚುನಾವಣೆ ಫಲಿತಾಂಶದ ಮೂಲಕ ಏನೂ ತಿಳಿದುಕೊಳ್ಳಬೇಕಾದರೆ ವಿಜಯೇಂದ್ರ ಅವರ ನಾಯಕತ್ವವನ್ನ ಜನ ತಿರಸ್ಕಾರ ಮಾಡಿದ್ದಾರೆ. ವಿಜಯೇಂದ್ರ ಅವರಿಗೆ ಸ್ವಾಭಿಮಾನ ಇದ್ದರೆ ಅವರೇ ರಾಜೀನಾಮೆ ನೀಡಬೇಕು. ವಿಜಯೇಂದ್ರ ನಾಚಿಕೆಗೇಡಾಗಿದ್ದರೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲಿ ಎಂದು ಹರಿಹಾಯ್ದರು.

ಇನ್ನೂ ಭರತ ಬೊಮ್ಮಾಯಿ ಸೋಲು ನಿಜಕ್ಕೂ ಆಘಾತ ತಂದಿದೆ. ರೌಡಿಯನ್ನ ಜನ ಆಯ್ಕೆ ಮಾಡಿದ್ದಾರೆ. ಜನರ ತೀರ್ಪು ಬಿಜೆಪಿ ನಾಯಕತ್ವ ಬದಲಾವಣೆ ಆಗಬೇಕು ಎನ್ನುವುದಿದೆ. ಹೊಸ ನಾಯಕತ್ವ ರಾಜ್ಯಕ್ಕೆ ಮತ್ತು ಬಿಜೆಪಿಗೆ ಬೇಕಿ

ಬಿಜೆಪಿಯಲ್ಲಿ ಯೋಗೇಶ್ವರ ಅವರಿಗೆ ಟಿಕೆಟ್ ಕೊಡುವಂತೆ ನಾನು ಹೇಳಿದ್ದೆ. ಅವರು ಈ ವಿಚಾರವಾಗಿ ಕೊನೆಯವರೆಗೂ ಕಾದಿದ್ದರು.  ಜನ ಯೋಗೇಶ್ವರ್ ಕೆಲಸ ಮಾಡಿದ್ದನ್ನು ನೋಡಿ ಗೆಲುವು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ಅವರು ಯೋಚನೆ ಮಾಡಿ ಪಕ್ಷ ಸಂಘಟನೆ ಮಾಡಬೇಕು ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

Karnataka By Election: ಕನಿಷ್ಠ ಶೇಕಡಾ ಮತ ಅಂತರದಿಂದ ಕಾಂಗ್ರೆಸ್ ಗೆದ್ದಿದೆ: ಪಿ. ರಾಜೀವ್