Select Your Language

Notifications

webdunia
webdunia
webdunia
webdunia

ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಅದಕ್ಕೆ ಈ ಮೂರು ಅಂಶವೇ ಕಾರಣ

Siddaramaiah-DK Shivakumar

Krishnaveni K

ಬೆಂಗಳೂರು , ಶುಕ್ರವಾರ, 22 ನವೆಂಬರ್ 2024 (09:48 IST)
ಬೆಂಗಳೂರು: ಕರ್ನಾಟಕದಲ್ಲಿ ಉಪಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಒಂದು ವೇಳೆ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋತರೆ ಅದಕ್ಕೆ ಈ ಮೂರು ಅಂಶಗಳೇ ಕಾರಣವಾಗಲಿದೆ.

ನಾಳೆ ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರಿನಲ್ಲಿ ನಡೆದಿದ್ದ ವಿಧಾನಸಭಾ ಉಪಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ನಿಂದ ಸಿಪಿ ಯೋಗೇಶ್ವರ್, ಶಿಗ್ಗಾಂವಿಯಲ್ಲಿ ಯಾಸಿರ್ ಪಠಾಣ್ ಮತ್ತು ಸಂಡೂರಿನಲ್ಲಿ ಅನ್ನಪೂರ್ಣ ತುಕರಾಂ ಸ್ಪರ್ಧೆ ಮಾಡಿದ್ದಾರೆ.

ಈ ಮೂರು ಕ್ಷೇತ್ರಗಳ ಪೈಕಿ ಮತಗಟ್ಟೆ ಸಮೀಕ್ಷೆ ಪ್ರಕಾರ ಸಂಡೂರಿನಲ್ಲಿ ಮಾತ್ರ ಕಾಂಗ್ರೆಸ್ ಗೆಲ್ಲಬಹುದು ಎಂದು ವರದಿ ಹೇಳುತ್ತಿವೆ. ಒಂದು ವೇಳೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಅದಕ್ಕೆ ಈ ಮೂರು ಅಂಶಗಳೇ ಕಾರಣವಾಗಲಿದೆ.

ವಕ್ಫ್ ವಿವಾದ
ವಕ್ಫ್ ಸಚಿವ ಜಮೀರ್ ಅಹ್ಮದ್ ಉಪಚುನಾವಣೆ ಹೊಸ್ತಿಲಲ್ಲಿ ವಕ್ಫ್ ಭೂಮಿ ನೋಟಿಫಿಕೇಷನ್ ಮಾಡಲು ಆದೇಶಿಸಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೇ ವಿಚಾರವನ್ನಿಟ್ಟುಕೊಂಡು ರಾಜ್ಯ ಬಿಜೆಪಿ ಹೋರಾಟಕ್ಕಿಳಿದಿದೆ. ರೈತರ ಜಮೀನು ಪಹಣಿಯಲ್ಲೂ ವಕ್ಫ್ ಹೆಸರು ನಮೂದಾಗಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಜಮೀನು ವಕ್ಫ್ ಗೆ ಸೇರಿಸಿಬಿಡುತ್ತದೆ ಎಂದು ಬಿಜೆಪಿ ಜನರ ಮುಂದೆ ಹೇಳಿರುವುದು ಕಾಂಗ್ರೆಸ್ ಗೆ ತಿರುಗುಬಾಣವಾಗಲಿದೆ.

ಜಮೀರ್ ಅಹ್ಮದ್ ಕರಿಯಾ ಹೇಳಿಕೆ
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಸೋಲಿಗೆ ಜಮೀರ್ ಅಹ್ಮದ್ ಕರಿಯಾ ಹೇಳಿಕೆಯೇ ಕಾರಣವಾಗಬಹದು ಎನ್ನಲಾಗುತ್ತಿದೆ. ಎಚ್ ಡಿ ಕುಮಾರಸ್ವಾಮಿ ಒಕ್ಕಲಿಗರ ಪ್ರಮುಖ ನಾಯಕ. ಅವರನ್ನು ವರ್ಣ ನಿಂದನೆ ಮಾಡಿದ ಜಮೀರ್ ಕಾಂಗ್ರೆಸ್ ಗೆ ಬೀಳಬೇಕಿದ್ದ ಒಕ್ಕಲಿಗರ ಮತಕ್ಕೇ ಖೆಡ್ಡಾ ತೋಡಿದರು ಎಂಬ ಅಸಮಾಧಾನ ಕಾಂಗ್ರೆಸ್ ನಾಯಕರಲ್ಲಿದೆ.

ಬಿಪಿಎಲ್ ಕಾರ್ಡ್ ಮತ್ತು ಗ್ಯಾರಂಟಿ ವಿವಾದ
ಇತ್ತೀಚೆಗೆ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ಪರಿಷ್ಕರಣೆಗೆ ಮುಂದಾಗಿರುವುದು ಜನಾಕ್ರೋಶಕ್ಕೆ ಕಾರಣವಾಗಿತ್ತು. ರಾಜ್ಯ ಸರ್ಕಾರ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಇದ್ದ ಬದ್ದ ಯೋಜನೆಗಳಿಗೆಲ್ಲಾ ಕತ್ತರಿ ಹಾಕುತ್ತಿದೆ ಎಂಬ ಭಾವನೆ ಜನರಲ್ಲಿ ಬರಲಾರಂಭಿಸಿದೆ. ಇದು ಕಾಂಗ್ರೆಸ್ ಗೆ ಈ ಚುನಾವಣೆಯಲ್ಲಿ ಮುಳುವಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಪಿಎಲ್ ಕಾರ್ಡ್ ವಿವಾದ, ಶಪಥ ಮಾಡಿದ ಸಿಎಂ ಸಿದ್ದರಾಮಯ್ಯ