Select Your Language

Notifications

webdunia
webdunia
webdunia
webdunia

ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟ ಮೊದಲ ವಾರವೇ ರಜತ್‌ಗೆ ಕಳಪೆ ಪಟ್ಟ

BigBoss Season 11, Colors Kannada, Rajath Kishan,

Sampriya

ಬೆಂಗಳೂರು , ಶುಕ್ರವಾರ, 22 ನವೆಂಬರ್ 2024 (15:54 IST)
photo Courtesy Instagram
ಬೆಂಗಳೂರು: ಕಳೆದ ಭಾನುವಾರ ಬಿಗ್‌ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್‌ ಸ್ಪರ್ಧಿಯಾಗಿ ಶೋಭಾ ಶೆಟ್ಟಿ ಹಾಗೂ ರಜತ್ ಕಿಶನ್ ಅವರು ಎಂಟ್ರಿ ಇದೀಗ ದೊಡ್ಮನೆಯಲ್ಲಿ ಜೋರಾಗಿ ಸದ್ದು ಮಾಡುತ್ತಿದೆ.

ಟಾಸ್ಕ್‌ ವೇಳೆ ರಜತ್ ಕಿಶನ್ ಅವರ ಮಾತಿನ ವರಸೆಗೆ ಮನೆಯ ಸದಸ್ಯರು ಅಸಮಾಧಾನ ಹೊರಹಾಕುತ್ತಿದ್ದಾರೆ. ಇದನ್ನು ನೋಡಿದ ಪ್ರೇಕ್ಷಕರು ಕೂಡಾ ರಜತ್‌ಗೆ ಶನಿವಾರ ಸುದೀಪ್ ಸರಿಯಾಗಿ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಚೆಂಡಿನ ಟಾಸ್ಕ್‌ ವೇಳೆ ಗೋಲ್ಡ್ ಸುರೇಶ್ ಹಾಗೂ ರಜತ್ ನಡುವೆ ಮಾತು ತಾರಕಕ್ಕೇರಿ, ರಜತ್ ಅವರು ಕೆಟ್ಟ ಪದಗಳಿಂದ ಬೈದಿದ್ದಾರೆ. ಕೋಪಗೊಂಡ ಸುರೇಶ್ ಮನೆಯಿಂದ ಹೊರಹೋಗುವುದಾಗಿ ಬಿಗ್‌ಬಾಸ್ ಬಳಿ ಹೇಳಿಕೊಂಡರು. ಕೊನೆಗೆ ಸಹಸ್ಪರ್ಧಿಗಳ ಮಾತಿನಿಂದ ಸಮಾಧಾನಗೊಂಡಿದ್ದಾರೆ.

ಇದೀಗ ವಾರದ ಟಾಸ್ಕ್ ಮುಗಿದಿದ್ದು,  ಮೊದಲ ವಾರವೇ ಕಳಪೆ ಪಟ್ಟದೊಂದಿಗೆ ಜೈಲು ಸೇರಿದ್ದಾರೆ.  ಇನ್ನೂ ಈ ವಾರ ನಾಮಿನೇಷನ್‌ನಲ್ಲಿ ಚೈತ್ರಾ, ಮಂಜು, ತ್ರಿವಿಕ್ರಮ್, ಮೋಕ್ಷಿತಾ, ಗೌತಮಿ, ಧರ್ಮ ಮತ್ತು ಹನುಮಂತು ಇದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಪತ್ರೆಯಲ್ಲಿರುವ ನಟ ದರ್ಶನ್ ಗೆ ಎದೆ ನಡುಗುವಂತಹಾ ಸುದ್ದಿ