Select Your Language

Notifications

webdunia
webdunia
webdunia
webdunia

ಮೋಕ್ಷಿತಾಗೆ ಅಸಲಿ ಆಟ ಇನ್ನೂ ತೋರಿಸ್ತೇನೆ, ಸವಾಲೆಸೆದ ಧನರಾಜ್

ಮೋಕ್ಷಿತಾಗೆ ಅಸಲಿ ಆಟ ಇನ್ನೂ ತೋರಿಸ್ತೇನೆ, ಸವಾಲೆಸೆದ ಧನರಾಜ್

Sampriya

ಬೆಂಗಳೂರು , ಶುಕ್ರವಾರ, 15 ನವೆಂಬರ್ 2024 (19:37 IST)
Photo Courtesy X
ಈ ವಾರ ಜೋಡಿ ಆಟ ನೀಡಿದ ಬಿಗ್‌ಬಾಸ್‌ ಮನೆಯಲ್ಲಿ ಕಳಪೆ ವಿಚಾರಕ್ಕೆ ಸ್ಪರ್ಧಿಯಾಗಿದ್ದ ಮೋಕ್ಷಿತಾ ಹಾಗೂ ಧನರಾಜ್ ಮದುವೆ ರಂಪಾಟ ನಡೆದಿದೆ.  

ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಮೋಕ್ಷಿತಾ ಸೇರಿದಂತೆ ಹಲವರು ಧನರಾಜ್ ಅವರನ್ನು ಕಳಪೆ ಎಂದು ಹೇಳಿದ್ದಾರೆ. ಈ ವಾರದ ಜೋಡಿ ಟಾಸ್ಕ್‌ನಲ್ಲಿ ತಮ್ಮ ಜತೆಯಾಗಿದ್ದ ಧನರಾಜ್ ಅವರನ್ನೇ ಮೋಕ್ಷಿತಾ ಕಳಪೆ ಎಂದಿದ್ದು ಧನರಾಜ್‌ ಕೋಪಕ್ಕೆ ಕಾರಣವಾಗಿದೆ.

ಇದಕ್ಕೆ ಕಾರಣ ನೀಡಿದ ಮೋಕ್ಷಿತಾ ಅವರು, ಟಾಸ್ಕ್ ವಿಚಾರ ಅಂತ ಬಂದಾಗ ಸ್ಪಾರ್ಟ್ ಆಗಿ ಅವರು  ಯೋಚನೆ ಮಾಡುತ್ತಿರಲಿಲ್ಲ. ಜೋಡಿಯಾಗಿದ್ದಾಗ ನೀವು ಎಷ್ಟು ಬೆಂಬಲವಾಗಿದ್ರಿ ಎಂದು ಧನರಾಜ್ ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವಡ ವಾಗ್ವಾದ ಶುರುವಾಗಿದೆ.

ಆಗ ಧನರಾಜ್ ಅಹಂಕಾರ ಇದೆ ನಿಮಗೆ ಅಂತ ಹೇಳಿ ಆ ಕಳಪೆ ಪಟ್ಟವನ್ನು ಮೋಕ್ಷಿತಾ ಅವರಿಗೆ ಕಟ್ಟಿದ್ದಾರೆ. ಮೋಕ್ಷಿತಾ ಅಹಂಕಾರಿ ಎಂದು ಧನರಾಜ್ ತಿವಿದಿದ್ದಾರೆ. ಮೋಕ್ಷಿತಾಗೆ ಇನ್ಮೇಲೆ ಅಸಲಿ ಆಟ ತೋರಿಸುತ್ತೇನೆ ಎಂದು ಧನರಾಜ್ ಸವಾಲುಹಾಕಿದ್ದಾರೆ.

ಇದರಿಂದ ಬೇಸರಗೊಂಡ ಮೋಕ್ಷಿತಾ, ಶಿಶಿರ್ ಹಾಗೂ ಐಶ್ವರ್ಯಾ ಬಳಿ ಕಣ್ಣೀರು ಹಾಕಿದ್ದಾರೆ. ಿದೀಗ ಜೋಡಿಯಾಗಿದ್ದವರ ಮಧ್ಯದಲ್ಲಿಯೇ ಫ್ರೆಂಡ್‌ಶಿಪ್ ಮುರಿದು ಹೋಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೋಮ್ಯಾಂಟಿಗ್ ಆಗಿ ಹೆಜ್ಜೆ ಹಾಕಿದ ಭವ್ಯಾ ತ್ರಿವಿಕ್ರಮ್: ಆಸೆ ನೆರವೇರಿಸಿದ್ದಕ್ಕೆ ಥ್ಯಾಂಕ್ಸ್‌ ಎಂದ ಫ್ಯಾನ್ಸ್‌