Select Your Language

Notifications

webdunia
webdunia
webdunia
webdunia

ಆಸ್ಪತ್ರೆಯಲ್ಲಿರುವ ನಟ ದರ್ಶನ್ ಗೆ ಎದೆ ನಡುಗುವಂತಹಾ ಸುದ್ದಿ

Renukaswamy-Darshan

Krishnaveni K

ಬೆಂಗಳೂರು , ಶುಕ್ರವಾರ, 22 ನವೆಂಬರ್ 2024 (11:38 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ನಟ ದರ್ಶನ್ ಜಾಮೀನು ಪಡೆದು ಈಗ ಆಸ್ಪತ್ರೆಯಲ್ಲಿದ್ದಾರೆ. ಆದರೆ ಬೆನ್ನು ನೋವಿನ ಕಾರಣಕ್ಕೆ ಆಸ್ಪತ್ರೆ ಸೇರಿರುವ ದರ್ಶನ್ ಗೆ ಎದೆ ನಡುಗಿಸುವಂತಹ ಶಾಕ್ ಪೊಲೀಸರು ಕೊಟ್ಟಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸುತ್ತಿರುವ ಪೊಲೀಸರು ಈಗ ಆರೋಪಿಯೊಬ್ಬರ ಮೊಬೈಲ್ ರಿಟ್ರಿವ್ ಮಾಡಲು ಯಶಸ್ವಿಯಾಗಿದ್ದಾರೆ. ಇದರಲ್ಲಿ ರೇಣುಕಾಸ್ವಾಮಿ ಶವದ ಮುಂದೆಯೇ ದರ್ಶನ್ ನಿಂತಿರುವ ಫೋಟೋಗಳು ಲಭ್ಯವಾಗಿದೆ. ಇದನ್ನು ಪೊಲೀಸರು ಈಗ ನ್ಯಾಯಾಲಯದ ಗಮನಕ್ಕೂ ತಂದಿದ್ದಾರೆ.

ಇದುವರೆಗೆ ದರ್ಶನ್ ಪರ ವಕೀಲರು ನ್ಯಾಯಾಲಯದ ಮುಂದೆ ಪ್ರಕರಣದಲ್ಲಿ ರೇಣುಕಾಗೆ ದರ್ಶನ್ ಹೊಡೆದಿದ್ದರಷ್ಟೇ. ಬಳಿಕ ಅಲ್ಲಿಂದ ತೆರಳಿದ್ದರು. ರೇಣುಕಾ ಸಾವಿಗೆ ದರ್ಶನ್ ಕಾರಣವಲ್ಲ. ಅವರು ಆ ಸಂದರ್ಭದಲ್ಲಿ ಸ್ಥಳದಲ್ಲೇ ಇರಲಿಲ್ಲ ಎಂದು ವಾದ ಮಂಡಿಸುತ್ತಿದ್ದರು. ಆದರೆ ಪೊಲೀಸರು ನೀಡಿದ ಈ ಎರಡು ಫೋಟೋಗಳಿಂದ ಪ್ರಕರಣಕ್ಕೆ ಟ್ವಿಸ್ಟ್ ಸಿಗಲಿದ್ದು, ದರ್ಶನ್ ವಿರುದ್ಧ ಸಾಕ್ಷ್ಯ ಪ್ರಬಲವಾಗಿದೆ.

ರೇಣುಕಾ ಶವದ ಮುಂದೆ ದರ್ಶನ್ ನಿಂತಿದ್ದ ಫೋಟೋವನ್ನು ಇನ್ನೊಬ್ಬ ಆರೋಪಿ ಪವನ್ ಕ್ಲಿಕ್ಕಿಸಿದ್ದ. ಆದರೆ ಆ ಫೋಟೋವನ್ನು ಬಳಿಕ ಡಿಲೀಟ್ ಮಾಡಿದ್ದ. ಇದೀಗ ಸತತ ಪ್ರಯತ್ನದ ನಂತರ ಫೋಟೋ ರಿಟ್ರಿವ್ ಮಾಡಲಾಗಿದ್ದು, ದರ್ಶನ್ ಶವದ ಮುಂದೆ ನಿಂತಿರುವುದು ಖಚಿತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ವಿಚ್ಛೇದನದ ಬಗ್ಗೆ ಸ್ವತಃ ಅಮಿತಾಭ್ ಬಚ್ಚನ್ ಮಾತು