ಮುಂಬೈ: ಅಭಿಷೇಕ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನದ ವದಂತಿಗಳ ಬಗ್ಗೆ ಇದೇ ಮೊದಲ ಬಾರಿಗೆ ಅಮಿತಾಭ್ ಬಚ್ಚನ್ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಜೊತೆಗೆ ವದಂತಿಗಳ ಬಗ್ಗೆ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ.
ಅಮಿತಾಭ್ ಬಚ್ಚನ್ ಬ್ಲಾಗ್ ನಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳುತ್ತಾರೆ. ಈ ಬಾರಿ ತಮ್ಮ ಮಗ ಮತ್ತು ಸೊಸೆ ಬಗ್ಗೆ ಹರಡುತ್ತಿರುವ ವಿಚ್ಛೇದನ ವದಂತಿಗಳ ಬಗ್ಗೆ ಮಾತನಾಡಿದ್ದಾರೆ. ಇದು ಮೊದಲನೇ ಬಾರಿಗೆ ಅಮಿತಾಭ್ ಮಗ-ಸೊಸೆ ಜೀವನದ ಬಗ್ಗೆ ಮಾತನಾಡಿದ್ದಾರೆ.
ಈ ರೀತಿಯ ಸುದ್ದಿಗಳಿಂದ ಕೆಲವರಿಗೆ ಲಾಭವಾಗಬಹುದು. ಆದರೆ ನನ್ನ ಗಮನ ಕುಟುಂಬದ ಮೇಲಿರುತ್ತದೆ. ಐಶ್ವರ್ಯಾ ಹಾಗೂ ಅಭಿಷೇಕ್ ಸಂಸಾರದಲ್ಲಿ ಸಮಸ್ಯೆಗಳಿವೆಯೇ ಎಂದು ಪ್ರಶ್ನಾರ್ಥಕ ಚಿಹ್ನೆಯಲ್ಲಿ ಬರೆಯಲಾಗುತ್ತದೆ. ಅಂದರೆ ಬರೆಯುವವರಿಗೆ ಅದು ಪ್ರಶ್ನಾರ್ಥಕವಾಗಿದೆ. ಕೆಲವೊಂದು ಊಹಾಪೋಹಗಳು ಊಹಾಪೋಹಗಳೇ. ನಾನು ನನ್ನ ಕುಟುಂಬದ ಬಗ್ಗೆ ಮಾತನಾಡುವುದು ಕಡಿಮೆ. ಯಾಕೆಂದರೆ ಅದು ನನ್ನ ಖಾಸಗಿ ವಿಚಾರ ಎಂದು ಅಮಿತಾಭ್ ಬರೆದುಕೊಂಡಿದ್ದಾರೆ. ಇತ್ತೀಚೆಗೆ ಮೊಮ್ಮಗಳು ಆರಾಧ್ಯ ಹುಟ್ಟುಹಬ್ಬವಿತ್ತು. ಆಗಲೂ ಬಚ್ಚನ್ ಕುಟುಂಬದಿಂದ ಯಾರೂ ಸೋಷಿಯಲ್ ಮೀಡಿಯಾದಲ್ಲಿ ವಿಶ್ ಮಾಡಿಕೊಂಡಿರಲಿಲ್ಲ. ಬರ್ತ್ ಡೇ ಸೆಲೆಬ್ರೇಷ್ ನಲ್ಲೂ ಭಾಗಿಯಾಗಿರಲಿಲ್ಲ. ಹೀಗಾಗಿ ಮತ್ತೆ ಇಬ್ಬರ ಸಂಬಂಧದ ನಡುವೆ ಅನುಮಾನಗಳು ಸೃಷ್ಟಿಯಾಗಿತ್ತು.