Daily Horoscope

Select Your Language

Notifications

webdunia
webdunia
webdunia
webdunia

ಜೋಡಿಹಕ್ಕಿ ಧಾರವಾಹಿ ಹೀರೋ ನಟ ತಾಂಡವ್ ರಾಮ್ ಅರೆಸ್ಟ್

Thandav Ram
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೋಡಿಹಕ್ಕಿ ಧಾರವಾಹಿಯ ಹೀರೋ ಆಗಿದ್ದ ನಟ ತಾಂಡವ್ ರಾಮ್ ಕೊಲೆಯತ್ನ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾರೆ.

ಚಂದ್ರಾ ಲೇಔಟ್ ನ ಮನೆ ಕಮ್ ಕಚೇರಿಯಲ್ಲಿ ಘಟನೆ ನಡೆದಿದೆ. ನಿರ್ದೇಶಕ ಭರತ್ ಎಂಬವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೆ ಯತ್ನಿಸಿದ ಆರೋಪದಲ್ಲಿ ತಾಂಡವ್ ರಾಮ್ ನನ್ನು ಪೊಲೀಸರು ಬಂಧಿಸಿದ್ದಾರೆ. ಭರತ್ ನಿರ್ದೇಶನದಲ್ಲಿ ತಾಂಡವ್ ರಾಮ್ ಹೀರೋ ಆಗಿ ಸಿನಿಮಾ ಮಾಡಲು ಹೊರಟಿದ್ದರು. ಆದರೆ ಸಿನಿಮಾ ಇನ್ನೂ ಸೆಟ್ಟೇರದ ಕಾರಣ ಹತಾಶೆಗೊಂಡು ತಾಂಡವ್ ರಾಮ್ ಈ ಕೃತ್ಯಕ್ಕೆ ಮುಂದಾಗಿದ್ದಾರೆ.

ಮುಗಿಲ್ ಪೇಟೆ ಸಿನಿಮಾ ಖ್ಯಾತಿಯ ನಿರ್ದೇಶಕ ಭರತ್ ಎಂಬವರ ಮೇಲೆ ಕೊಲೆ ಯತ್ನ ನಡೆಸಿದ್ದಾರೆ. ಸಿನಿಮಾಗಾಗಿ ತಾಂಡವ್ ಸುಮಾರು 6-7 ಲಕ್ಷ ರೂ. ಹಣವನ್ನೂ ನೀಡಿದ್ದರು. ಆದರೆ ಸಿನಿಮಾ ಸೆಟ್ಟೇರಿ ತುಂಬಾ ಸಮಯವಾದರೂ ಇನ್ನೂ ಸಿನಿಮಾ ಮುಗಿಸಿರಲಿಲ್ಲ. ಸಿನಿಮಾ ಕೆಲಸ ಮುಗಿಯದೇ ತನ್ನ ಕೆರಿಯರ್ ಹಾಳಾಗಿದೆ ಎಂಬುದು ತಾಂಡವ್ ಆಕ್ರೋಶಕ್ಕೆ ಕಾರಣವಾಗಿತ್ತು.

ಇದೇ ವಿಚಾರವಾಗಿ ಇಬ್ಬರ ನಡುವೆ ಚಂದ್ರಾ ಲೇ ಔಟ್ ನಲ್ಲಿರುವ ಮನೆಯಲ್ಲಿ ಗಲಾಟೆಯಾಗಿದೆ. ಈ ವೇಳೆ ತಾಂಡವ್ ತನ್ನ ಕಾರಿನಲ್ಲಿ ಸಿಂಗಲ್ ಬ್ಯಾರಲ್ ಗನ್ ತೆಗೆದುಕೊಂಡು ಬಂದು ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಕೆಗೆ ಯತ್ನಿಸಿದ್ದಾನೆ. ಈ ಘಟನೆ ಸಂಬಂಧಟ್ಟಂತೆ ತಾಂಡವ್ ನನ್ನು ಅರೆಸ್ಟ್ ಮಾಡಲಾಗಿದೆ.

ಜೀ ಕನ್ನಡ ವಾಹಿನಿಯಲ್ಲಿ ಜೋಡಿಹಕ್ಕಿ ಧಾರವಾಹಿ ಮೂಲಕ ಖ್ಯಾತಿ ಪಡೆದಿದ್ದ ತಾಂಡವ್ ಬಳಿಕ ಅದೇ ವಾಹಿನಿಯಲ್ಲಿ ಭೂಮಿಗೆ ಬಂದ ಭಗವಂತ ಎಂಬ ಧಾರವಾಹಿಯನ್ನೂ ನಿರ್ಮಿಸಿದ್ದರು. ಈ ನಡುವೆ ಎರಡು ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಗಳ ಬಯಕೆಯಂತೇ ಮಗನ ಕರೆದ ಅಭಿಷೇಕ್ ಅಂಬರೀಶ್