ಬೆಂಗಳೂರು: ಗುರುವಾರ ಮುಂಬೈನಲ್ಲಿ ಆತ್ಮಹತ್ಯೆ ಶರಣಾದ ಕ್ರೈಂ ಪ್ಯಾಟ್ರೋಲ್ ಖ್ಯಾತಿಯ ಕಿರುತೆರೆ ನಟ ನಿತಿನ್ ಚೌಹಾಣ್ ಅವರು ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪ್ರಾಥಮಿಕ ತನಿಖೆಯಲ್ಲಿ ನಟ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.
ಒಂದು ಸಮಯದಲ್ಲಿ ಹಿಂದಿ ಕಿರುತೆರೆಯಲ್ಲಿ ಮಿಂಚಿದ್ದ ನಿತಿನ್‌ಗೆ ಕಾಲಕ್ರಮೇಣ ಅವಕಾಶಗಳು ಕಡಿಮೆಯಾಗಿತ್ತು. ಇದರಿಂದ ಖಿನ್ನತೆಯಿಂದ ಬಳಲುತ್ತಿದ್ದರು. ಅದಲ್ಲದೆ ಸರಿಯಾದ ಕೆಲಸ ಮತ್ತು ಸಂಭಾವಣೆ ಸಿಗುತ್ತಿರಲಿಲ್ಲ ಎಂದು ಕುಟುಂಬದವರು ಹೇಳಿದ್ದಾರೆ.
ಇನ್ನೂ ಮಾನಸಿಕ ಖಿನ್ನತೆಗಾಗಿ ಈಚೆಗೆ ಚಿಕಿತ್ಸೆಯನ್ನು ಕೂಡಾ ಪಡೆಯುತ್ತಿದ್ದರು. ವೃತ್ತಿ ಹಾಗೂ ವೈಯಕ್ತಿಕ ಬದುಕನ್ನು ಸಮತೋಲಗೊಳಿಸುವಲ್ಲಿ ಹೆಣಗುತ್ತಿದ್ದರು ಎಂದೂ ಹೇಳಿದ್ದಾರೆ.
ಅದಾಗ್ಯೂ ಪೊಲೀಸರು ಈ ಪ್ರಕರಣವನ್ನು ಕೌಟುಂಬಿಕ, ಹಣಕಾಸಿನ ವ್ಯವಹಾರದ ದೃಷ್ಟಿಕೋನದಿಂದ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. 35ವರ್ಷದ ನಿತಿನ್ ಆತ್ಮಹತ್ಯೆ ಇಡೀ ಚಿತ್ರರಂಗಕ್ಕೆ ಶಾಕ್ ನೀಡಿತ್ತು. ಅವರ ನಿಧನಕ್ಕೆ ಹಿಂದಿ ಕಿರುತೆರೆ ಲೋಕದ ಅನೇಕರು ಕಂಬನಿ ಮಿಡಿದಿದ್ದಾರೆ.
ಉತ್ತರ ಪ್ರದೇಶ ಆಲಿಘಡ ಮೂಲದ ನಿತಿನ್, ಹಿಂದಿಯ ದಾದಾಗಿರಿ–2 ರಿಯಾಲಿಟಿ ಶೋ ವಿಜೇತರಾಗಿದ್ದರು. ಇದಲ್ಲದೇ ಅನೇಕ ರಿಯಾಲಿಟಿ ಶೋ, ಹಿಂದಿ ಧಾರಾವಾಹಿಗಳ ಮೂಲಕ ಅವರು ಕಿರುತೆರೆಯಲ್ಲಿ ಮಿಂಚಿದ್ದರು