Publish Date: Fri, 04 Sep 2020 (18:36 IST)
Updated Date: Fri, 04 Sep 2020 (18:38 IST)
ರಾಜ್ಯದಲ್ಲಿ ಡ್ರಗ್ಸ್ ದಂಧೆ ಜೋರಾಗಿ ಸದ್ದು ಮಾಡುತ್ತಿದ್ದು, ಘಟಾನುಘಟಿ ಸಿನಿಮಾ ನಾಯಕಿಯರು, ರಾಜಕೀಯ ಮುಖಂಡರ ಮಕ್ಕಳ ಹೆಸರು ಕೇಸ್ ನಲ್ಲಿ ಕೇಳಿ ಬರುತ್ತಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಯಾರು ಎಷ್ಟೇ ಪ್ರಭಾವಿ ವ್ಯಕ್ತಿಗಳಾದರೂ ಅವರನ್ನು ಶಿಕ್ಷೆಗೊಳಪಡಿಸುತ್ತೇವೆ ಎಂದಿದ್ದಾರೆ.
ಸಿಸಿಬಿ ಅಧಿಕಾರಿಗಳು ಸರಿಯಾದ ದಾಖಲೆ ಕಲೆಹಾಕಿ ನೋಟಿಸ್ ಕೊಡುತ್ತಿದ್ದಾರೆ.
ಆಧಾರವಿಲ್ಲದೇ ಯಾರ ಹೆಸರೂ ಬಹಿರಂಗ ಆಗುವುದಿಲ್ಲ ಎಂದ ಸಚಿವರು, ತಪ್ಪಿತಸ್ಥರ ವಿರುದ್ಧ ಶಿಕ್ಷೆ ಆಗಲಿದೆ ಎಂದು ಹೇಳಿದ್ದಾರೆ.