Publish Date: Fri, 04 Sep 2020 (11:15 IST)
Updated Date: Fri, 04 Sep 2020 (11:18 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ನಂಟಿನ ಬಗ್ಗೆ ಮಾಧ‍್ಯಮಗಳಿಗೆ ಹೇಳಿಕೆ ನೀಡುವಾಗ ವಿವಾದಿತ ಹೇಳಿಕೆ ನೀಡಿದ ನಟಿ ನಿವೇದಿತಾ ಮೇಲೆ ಎಫ್ ಐಆರ್ ದಾಖಲಾಗಿದೆ.
ನಟಿ ನಿವೇದಿತಾ ಗಾಂಜಾ ಕೂಡಾ ತುಳಸಿಯಷ್ಟೇ ಪವಿತ್ರ. ಅದರಲ್ಲಿ ಹಾನಿಕಾರಕ ಅಂಶ ಯಾವುದೂ ಇಲ್ಲ ಎಂದು ನಿವೇದಿತಾ ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದೀಗ ನಟಿಯ ಈ ಹೇಳಿಕೆ ವಿರುದ್ಧ ಎಫ್ ಐಆರ್ ದಾಖಲಾಗಿದೆ.