Publish Date: Fri, 04 Sep 2020 (10:53 IST)
Updated Date: Fri, 04 Sep 2020 (10:56 IST)
ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾಗೆ ಸಂಬಂಧಪಟ್ಟಂತೆ ಬೆಳ್ಳಂ ಬೆಳಿಗ್ಗೆ ನಟಿ ರಾಗಿಣಿ ದ್ವಿವೇದಿ ನಿವಾಸಕ್ಕೆ ದಾಳಿ ಮಾಡಿದ್ದ ಸಿಸಿಬಿ ಅಧಿಕಾರಿಗಳು ಈಗ ಅವರನ್ನು ವಿಚಾರಣೆಗಾಗಿ ಕಚೇರಿಗೆ ಕರೆದೊಯ್ದಿದ್ದಾರೆ.
ಸಿಸಿಬಿ ನಿನ್ನೆ ವಿಚಾರಣೆಗೆ ಹಾಜರಾಗುವಂತೆ ರಾಗಿಣಿಗೆ ನೋಟಿಸ್ ನೀಡಲಾಗಿತ್ತು. ಆದರೆ ಆಗ ಆಕೆ ಸೋಮವಾರ ಹಾಜರಾಗುವುದಾಗಿ ಕಾಲಾವಕಾಶ ನೀಡಿದ್ದರು. ಆದರೆ ಆಕೆ ಸಾಕ್ಷ್ಯ ನಾಶ ಮಾಡುವ ಸಾಧ‍್ಯತೆಯಿರುವುದರಿಂದ ರಾಗಿಣಿ ನಿವಾಸಕ್ಕೆ ಇಂದು ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಅದರಂತೆ ಹಲವು ದಾಖಲೆಗಳು, ಕಾರು, ಮೊಬೈಲ್ ಇತ್ಯಾದಿಗಳ ತಪಾಸಣೆ ನಡೆಸಿದ್ದಾರೆ. ಕಾರು ತಪಾಸಣೆ ವೇಳೆ ಮದ್ಯದ ಬಾಟಲಿಗಳು ಪತ್ತೆಯಾಗಿವೆ ಎನ್ನಲಾಗಿತ್ತು.
ಇದೀಗ ವಿಚಾರಣೆಗಾಗಿ ನೇರವಾಗಿ ಸಿಸಿಬಿ ಕಚೇರಿಗೆ ಕರೆದೊಯ್ದಿದ್ದಾರೆ. ಇದರ ಬೆನ್ನಲ್ಲೇ ಸಂಜನಾರನ್ನೂ ಸಿಸಿಬಿ ಇದೇ ರೀತಿ ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ.