Publish Date: Thu, 03 Sep 2020 (11:39 IST)
Updated Date: Thu, 03 Sep 2020 (11:42 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾಗೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ನಡೆಸಿದ ಪ್ರಶಾಂತ್ ಸಂಬರಗಿ ನಟಿ ಸಂಜನಾ, ರಾಗಿಣಿ ಬಗ್ಗೆಯೂ ಮಾತನಾಡಿದ್ದಾರೆ.
ರಾಗಿಣಿ ಬಗ್ಗೆ ಈಗಷ್ಟೇ ಟಿವಿಯಲ್ಲಿ ನೋಡಿದೆ. ಅವರು ಕೆಲವು ವರ್ಷಗಳ ಹಿಂದೆ ನನಗೆ ಯುಬಿ ಸಿಟಿ ಹತ್ತಿರ ಸಿಕ್ಕಾಗ ಈಗ ಒಬ್ಬ ವ್ಯಕ್ತಿ ಜತೆಗಿದ್ದರು. ನಾವಿಬ್ಬರೂ ಮದ್ವೆ ಆಗ್ತಿದ್ದೀವಿ ಎಂದರು. ನಾನು ಆ ಬಗ್ಗೆ ಹೆಚ್ಚೇನೂ ಕೆದಕಲಿಲ್ಲ. ಆದರೆ ಅವಳು ಡ್ರಗ್ ವ್ಯವಹಾರ ಮಾಡುತ್ತಿದ್ದಳು ಎಂದು ಗೊತ್ತಿರಲಿಲ್ಲ.
ಇನ್ನು ಸಂಜನಾ ಜತೆಗೆ ಹಿಂದೆ ಬಿಸಿ ಬಿಸಿ ಎನ್ನುವ ಒಂದು ಸಿನಿಮಾ ಮಾಡಲು ಹೊರಟಿದ್ದೆವು. ಆದರೆ ಅವಳು ಚಿಕ್ಕ ಹುಡುಗಿ ಅಂತ ರಿಜೆಕ್ಟ್ ಮಾಡಿದೆವು. ಅವಳ ಬಗ್ಗೆ ನಾನು ಹೆಚ್ಚೇನು ಹೇಳಲ್ಲ. ಹೇಳಿ ನನ್ನ ಬಾಯಿ ಗಲೀಜು ಮಾಡಲ್ಲ. ಅವರು ಯಾವ ಮಟ್ಟದಲ್ಲಿದ್ದಾರೆಂದು ಎಲ್ಲರಿಗೂ ಗೊತ್ತು ಎಂದು ಪ್ರಶಾಂತ್ ಹೇಳಿದ್ದಾರೆ.
ಇನ್ನು ವಾಣಿಜ್ಯ ಮಂಡಳಿ ತನ್ನನ್ನು ಚಿತ್ರರಂಗಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿರುವುದರ ಬಗ್ಗೆ ಪ್ರಶಾಂತ್ ಸುದೀರ್ಘವಾಗಿ ಮಾತನಾಡಿದ್ದು, ಚಿತ್ರರಂಗದಲ್ಲಿ ತಾನು ಒಬ್ಬ ಡಿಸ್ಟ್ರಿಬ್ಯೂಟರ್ ಆಗಿ ಸಿನಿಮಾ ನಿರ್ಮಾಪಕನಾಗಿಯೂ ಕೆಲಸ ಮಾಡಿದ್ದೇನೆ ಎಂದಿದ್ದಾರೆ. ಅಲ್ಲದೆ, ವಾಣಿಜ್ಯ ಮಂಡಳಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.