Select Your Language

Notifications

webdunia
webdunia
webdunia
webdunia

ಇಂದ್ರಜಿತ್ ಲಂಕೇಶ್ ಮೌನವಾಗಿದ್ದಿದ್ದರೆ ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ ಬಯಲಾಗುತ್ತಲೇ ಇರಲಿಲ್ಲ!

ಇಂದ್ರಜಿತ್ ಲಂಕೇಶ್ ಮೌನವಾಗಿದ್ದಿದ್ದರೆ ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ ಬಯಲಾಗುತ್ತಲೇ ಇರಲಿಲ್ಲ!
ಬೆಂಗಳೂರು , ಶುಕ್ರವಾರ, 4 ಸೆಪ್ಟಂಬರ್ 2020 (11:06 IST)
ಬೆಂಗಳೂರು: ಬೆಂಗಳೂರಿನಲ್ಲಿ ಡ್ರಗ್ ಜಾಲದ ಕಿಂಗ್ ಪಿನ್ ಅನಿಕಾ ಮತ್ತು ಗ್ಯಾಂಗ್ ಬಂಧಿತರಾದಾಗ ಸ್ಯಾಂಡಲ್ ವುಡ್ ನಲ್ಲೂ ನಮ್ಮ ವ್ಯವಹಾರವಿದೆ ಎಂದಷ್ಟೇ ಹೇಳಿದ್ದಳು. ಆದರೆ ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ಇಷ್ಟೊಂದು ಗಂಭೀರವಾಗಿದೆ ಎಂದು ಗೊತ್ತಾಗಲು ಕಾರಣ ಇಂದ್ರಜಿತ್ ಲಂಕೇಶ್.


ಇಂದ್ರಜಿತ್ ಲಂಕೇಶ‍್ ಧೈರ್ಯ ಮಾಡಿ ಮಾಫಿಯಾ ಬಗ್ಗೆ ಮಾಹಿತಿ ನೀಡಿದ್ದಕ್ಕೇ ಈ ಬಗ್ಗೆ ಗಂಭೀರವಾಗಿ ತನಿಖೆ ನಡೆಸಲು ಸಹಕಾರಿಯಾಗಿದೆ ಎಂದು ಸಿಸಿಬಿ ಪೊಲೀಸರೇ ಹೇಳಿದ್ದಾರೆ. ಚಿತ್ರರಂಗವನ್ನು ಹತ್ತಿರದಿಂದ ಬಲ್ಲ ಇಂದ್ರಜಿತ್ ಡ್ರಗ್ ತೆಗೆದುಕೊಳ್ಳುವವರ ಬಗ್ಗೆ ಸಾಕ್ಷ್ಯ ನೀಡಿಲ್ಲದೇ ಇರಬಹುದು. ಆದರೆ ಅವರು ಅನುಮಾನ ವ್ಯಕ್ತಪಡಿಸಿದ ನಟ-ನಟಿಯರ ಬಗ್ಗೆ ಪೊಲೀಸರು ಹದ್ದಿನಗಣ್ಣಿರಿಸಲು ಸಹಾಯವಾಗುತ್ತದೆ. ಇದರಿಂದ ಇಂತಹ ಮಾಫಿಯಾದಲ್ಲಿ ತೊಡಗಿಸಿಕೊಂಡವರ ಪತ್ತೆಯೂ ಸುಲಭವಾಗುತ್ತದೆ. ಹೀಗಾಗಿ ಇಂದ್ರಜಿತ್ ಗೆ ಚಿತ್ರರಂಗದಿಂದ ನೇರವಾಗಿ ಬೆಂಬಲ ಸಿಗದೇ ಹೋದರೂ ಅವರು ಮಾಡಿದ ಕೆಲಸದಿಂದ ಸಿಸಿಬಿ ಪೊಲೀಸರು ಜಾಗೃತರಾಗಿರುವುದಂತೂ ನಿಜ.

Share this Story:

Follow Webdunia kannada

ಮುಂದಿನ ಸುದ್ದಿ

ಒಟಿಟಿ ಮೂಲಕ ರಿಲೀಸ್ ಆಗಲಿದೆ ಅನುಷ್ಕಾ ಅಭಿನಯದ ನಿಶ್ಯಬ್ಧಂ ಚಿತ್ರ