Publish Date: Fri, 04 Sep 2020 (12:42 IST)
Updated Date: Fri, 04 Sep 2020 (12:43 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ಈಗ ಭಾರೀ ಸದ್ದು ಮಾಡುತ್ತಿದೆ. ನಟ-ನಟಿಯರ ವಿಚಾರಣೆಗೆ ಸಿಸಿಬಿ ಪಟ್ಟಿ ಸಿದ್ಧ ಮಾಡಿಕೊಂಡಿದೆ.
ಈ ನಡುವೆ ಕಿರುತೆರೆ ಮತ್ತು ಸ್ಯಾಂಡಲ್ ವುಡ್ ನಟ ಚಂದನ್ ಕುಮಾರ್ ಗಾಂಜಾ ಕುರಿತ ಹಾಡು ಮಾಡುವವರಿಗೆ ಯಾವ ಶಿಕ್ಷೆ ಕೊಡುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಇಂತಹ ಹಾಡುಗಳನ್ನು ಜನ ಲಕ್ಷಗಟ್ಟಲೆ ವೀಕ್ಷಣೆ ನೀಡಿ ಹಿಟ್ ಮಾಡುತ್ತಾರಲ್ಲಾ? ಅದರ ಬಗ್ಗೆ ನಿಮ್ಮ ಅಭಿಪ್ರಾಯವೇನೆಂದು ನೆಟ್ಟಿಗರ ಅಭಿಪ್ರಾಯ ಕೋರಿದ್ದಾರೆ. ಇದಕ್ಕೆ ಬಹುಪಾಲು ಜನ ಇಂತಹದ್ದೂ ನಿಲ್ಲಲಿ ಎಂದು ಆಗ್ರಹಿಸಿದ್ದಾರೆ.