Publish Date: Fri, 04 Sep 2020 (11:40 IST)
Updated Date: Fri, 04 Sep 2020 (11:42 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ಈಗ ಭಾರೀ ಚರ್ಚೆಯಾಗುತ್ತಿದೆ. ಈ ಬಗ್ಗೆ ಕಿರುತೆರೆಯ ಖ್ಯಾತ ನಟ ರಕ್ಷ್ ಹೇಳಿದ್ದೇನು ಗೊತ್ತಾ?
ಇತ್ತೀಚೆಗಷ್ಟೇ ನನಗೂ ಡ್ರಗ್ ತೆಗೆದುಕೊಳ‍್ಳಲು ಆಮಿಷಗಳು ಬರ್ತಿತ್ತು. ಆದರೆ ನಾನು ಅದನ್ನು ಸ್ವೀಕರಿಸಲಿಲ್ಲ ಎಂದು ಹೇಳಿಕೆ ನೀಡಿ ಸುದ್ದಿಯಾಗಿದ್ದ ರಕ್ಷ್ ಈಗ ಈ ಮಾದಕ ವ್ಯಸನಕ್ಕೆ ಯಾರೂ ಬಲಿಯಾಗಬೇಡಿ ಎಂದು ಮನವಿ ಮಾಡಿದ್ದಾರೆ. ‘ಸ್ಯಾಂಡಲ್ ವುಡ್, ಬಾಲಿವುಡ್ ಮತ್ತು ನಮ್ಮ ಸಾಮಾನ್ಯ ಜೀವನದಲ್ಲಿ ಡ್ರಗ್ ಮಾಫಿಯಾ ಬಗ್ಗೆ ಕೇಳಿಬರುತ್ತಿರುವ ಸುದ್ದಿಗಳು ನಿಜಕ್ಕೂ ಆಘಾತಕಾರಿ. ಎಲ್ಲರೂ ಎಚ್ಚರವಾಗಿರಿ, ಯಾರೂ ಈ ಕೂಪಕ್ಕೆ ಬೀಳದಿರಿ. ಅಲ್ಲದೆ, ಒಂದು ಬೆರಳಿನ ಎಲ್ಲಾ ಐದು ಬೆರಳುಗಳು ಒಂದೇ ರೀತಿ ಇರಲ್ಲ. ಹಾಗೆಯೇ ಎಲ್ಲಾ ನಟರೂ ಕೆಟ್ಟವರು ಎಂದುಕೊಳ್ಳಬೇಡಿ. ತಮ್ಮ ವೃತ್ತಿ ಜೀವನ ರೂಪಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ, ಕಷ್ಟಪಡುವ ಎಷ್ಟೋ ನಟರಿದ್ದಾರೆ. ಅವರನ್ನು ಗೌರವಿಸಿ’ ಎಂದು ರಕ್ಷ್ ಮನವಿ ಮಾಡಿದ್ದಾರೆ.