Publish Date: Sat, 17 Jun 2023 (19:45 IST)
Updated Date: Sat, 17 Jun 2023 (20:09 IST)
ಕರೆಂಟ್ ಬಿಲ್ ದುಪ್ಪಟ್ಟು ಹಿನ್ನೆಲೆ ಜನರ ಆಕ್ರೋಶ ಹೆಚ್ಚಾಗುತ್ತಿದೆ. ಚಿತ್ರದುರ್ಗದಲ್ಲಿ ಸರ್ಕಾರದ ವಿರುದ್ದ ಮಹಿಳೆಯರು ಆಕ್ರೋಶ ಹೊರ ಹಾಕಿದ್ದಾರೆ. 200 ಯೂನಿಟ್ ಫ್ರೀ ಅಂತ ಹೇಳಿ ಕರೆಂಟ್ ಬಿಲ್ ದುಪ್ಪಟ್ಟು ಹೆಚ್ಚಳ ಮಾಡಲಾಗಿದೆ. ಯೂನಿಟ್ಗೆ ಎರಡು ರೂಪಾಯಿಯಷ್ಟು ಏರಿಕೆ ಮಾಡಿದ್ದಾರೆ. ಗೃಹಜ್ಯೋತಿ ಯೋಜನೆ ಗ್ಯಾರಂಟಿ ಕೊಡುವಾಗ ಒಂದು ರೀತಿ ಹೇಳಿ, ಈಗ ಜನರ ಕಡೆಯಿಂದ ಟ್ಯಾಕ್ಸ್ ರೂಪದಲ್ಲಿ ವಸೂಲಿ ಮಾಡ್ತಿದ್ದಾರೆ. ಸಿದ್ದರಾಮಯ್ಯ ಅವರು ಬಿಟ್ಟಿ ಭಾಗ್ಯ ಘೋಷಣೆ ಮಾಡಿದ್ದಾರೆ. ಸಾಮಾನ್ಯ ಜನರಿಗೆ ಬರೆ ಎಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಸರ್ಕಾರದ ವಿರುದ್ದ ಮಹಿಳೆಯರು ಕಿಡಿಕಾರಿದ್ದಾರೆ.