Publish Date: Sat, 17 Jun 2023 (18:34 IST)
Updated Date: Sat, 17 Jun 2023 (19:41 IST)
ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ.. ವಿಧಾನಸಭೆಯ ಸೋಲಿನ ನಂತ್ರ ನಾಯಕರು ಒಳಗೊಳಗೆ ಕತ್ತಿಮಸೆಯೋಕೆ ಶುರುಮಾಡಿದ್ದಾರೆ.. ಸಂಸದ ಪ್ರತಾಪ್ ಸಿಂಹ ಹೊಡೆದ ಮಾತಿನ ಗುಂಡು ಮಾಜಿ ಸಿಎಂ ಬಿಎಸ್ ವೈ ಹಾಗೂ ಅವರ ಶಿಷ್ಯ ಬೊಮ್ಮಾಯಿಯವರ ಎದೆಗೆ ಬಿದ್ದಿದೆ.. ಹೀಗಾಗಿ ಲಿಂಗಾಯತ ವರ್ಸಸ್ ಸಂಘಪರಿವಾರ ಎಂಬ ಹೊಸ ಬೀಜ ಕಾದಟ ಆರಂಭವಾಗಿದೆ.. ಕಾಂಗ್ರೆಸ್ ನಾಯಕರ ಜೊತೆ ಹೊಂದಾಣಿಕೆ ರಾಜಕಾರಣದಿಂದಾಗಿಯೇ ಸೋಲಾಯ್ತು ಅನ್ನೋದನ್ನ ಯಡಿಯೂರಪ್ಪ ಹಾಗೂ ಬೊಮ್ಮಾಯಿ ತಲೆಗೆ ಕಟ್ಟೋಕೆ ಸಂತೋಷ್ ಬಣ ಪ್ರಯತ್ನ ನಡೆಸಿದೆ.. ಹಾಗಾಗಿಯೇ ಅದಕ್ಕೆ ಪ್ರತಾಪ್ ಸಿಂಹ,ಸಿ.ಟಿ.ರವಿಯಂತವರನ್ನ ಬಳಸಿಕೊಳ್ಳಲಾಗ್ತಿದೆ ಎಂಬ ಚರ್ಚೆಗಳು ಶುರುವಾಗಿವೆ.. ಹಾಗಾಗಿ ಬಿಎಸ್ ವೈ ಬಣ ಇದೀಗ ತಿರುಗಿಬಿದ್ದಿದೆ.
ಇನ್ನು ಹೊಂದಾಣಿಕೆ ರಾಜಕಾರಣದಿಂದ ಸೋಲಾಯ್ತು ಅನ್ನೋ ಪ್ರತಾಪ್ ಸಿಂಹ ಹೇಳಿಕೆಯಿಂದ ಮಾಜಿ ಸಿಎಂಗಳಿಬ್ಬರು ಕೆರಳಿ ಕೆಂಡವಾಗಿದ್ದಾರೆ.. ಪಕ್ಷದೊಳಗೆಯೇ ನಮ್ಮನ್ನ ರಾಜಕೀಯವಾಗಿ ಮುಗಿಸೋಕೆ ಹೊರಟಿದ್ದಾರೆಂದು ಬೇಸರಗೊಂಡಿದ್ದಾರೆ.. ಚುನಾವಣೆಯಲ್ಲಿ ನಮ್ಮ ಸಲಹೆಗಳನ್ನ ಕೇಳದೆ, ತಮಗಿಷ್ಟ ಬಂದಂತೆ ನಿರ್ಧಾರ ತೆಗೆದುಕೊಂಡು,ಈಗ ನಮ್ಮನ್ನೇ ಹೊಣೆಗಾರರನ್ನಾಗಿ ಬಿಂಬಿಸೋಕೆ ಹೊರಟಿದ್ದಾರೆಂದು ಆಕ್ರೋಶಗೊಂಡಿದ್ದಾರೆ.. ಹೀಗಾಗಿ ತಮ್ಮ ಆಪ್ತ ಬೆಂಬಲಿಗರನ್ನ ಮುಂದೆ ಬಿಟ್ಟು ಸಂತೋಷ್,ಪ್ರಹ್ಲಾದ್ ಜೋಶಿಯವರ ವಿರುದ್ಧ ದೂರು ಕೊಡಿಸಲು ಪ್ರಯತ್ನ ನಡೆಸಿದ್ದಾರೆ.. ಈ ಮೂಲಕ ಬಿ.ಎಲ್.ಸಂತೋಷ್ ಅಟಾಟೋಪಗಳಿಗೆ ಬ್ರೇಕ್ ಹಾಕಲು ಬಿಎಸ್ ವೈ ಹಾಗೂ ಬೊಮ್ಮಾಯಿ ಮುಂದಾಗಿದ್ದಾರೆಂಬ ಪಕ್ಷದೊಳಗೆ ಚರ್ಚೆ ನಡೆಯುತ್ತಿದೆ..