Publish Date: Sat, 17 Jun 2023 (16:45 IST)
Updated Date: Sat, 17 Jun 2023 (16:36 IST)
ಆಟೋ ಚಾಲಕರ ದುವರ್ತನೆ ಅತಿರೇಕಕ್ಕೆ ಹೋಗಿದೆ.ಒಂದು ತಿಂಗಳ ಅಂತರದಲ್ಲಿ ಮೂರನೇ ಇನ್ಸಿಡೆಂಟ್ ನಡೆದಿದೆ.ಕಳೆದು ತಿಂಗಳು 25 ರಂದು ಘಟನೆ ನಡೆದಿದ್ದು,ರ್ಯಾಪಿಡೊ ಬುಕ್ ಮಡಿದ್ದಕ್ಕೆ ಆಟೋಗೆ ಚಾಲಕ ಗುದ್ದಿದ್ದಾನೆ.HSR ಲೇಔಟ್ ನಲ್ಲಿ ಈ ಘಟನೆ ನಡೆದಿದೆ.ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಆಟೋ ಚಾಲಕನಿಂದ ಒರ್ವನ ಹತ್ಯೆ ನಡೆದಿತ್ತು.ಡಬಲ್ ಹಣ ನೀಡಬೇಕು ಎಂದು ಗಲಾಟೆ ಆಗಿತ್ತು .ಪ್ರಯಾಣಿಕರಿಬ್ಬರ ಮೇಲೂ ಆಟೋ ಚಾಲಕ ಹಲ್ಲೆ ಮಾಡಿದ.ಈ ಎರಡು ಘಟನೆಗಳು ಮಾಸುವ ಮುನ್ನ ಮತ್ತೊಂದು ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಪೊಲೀಸ್ ವಾಹನಕ್ಕೆ ಹಿಂದಿನಿಂದ ಗುದ್ದಿ ಆಟೋ ಚಾಲಕ ವಾಗ್ವಾದ ನಡರಸಿದ್ದಾನೆ.ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಯುವತಿ ವೈರಲ್ ಮಾಡಿದ್ದಾಳೆ.
ಅಲ್ಲದೇ ಕಪಾಳ ಮೋಕ್ಷ ಮಾಡಿದ್ದ ಪೊಲೀಸ್ ದೃಶ್ಯವನ್ನು ಮಾತ್ರ ಯುವತಿ ವೈರಲ್ ಮಾಡಿದ್ದು,ಸಂಪೂರ್ಣ ಘಟನೆಯ ಚಿತ್ರಣವನ್ನ ಸಂಚಾರ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ತೆಗೆಸಿದ್ದಾರೆ.ಸಿಸಿಟಿವಿ ತರಿಸಿ ಸಂಪೂರ್ಣ ವಿಡಿಯೋವನ್ನ ಸಂಚಾರ ಜಂಟಿ ಆಯುಕ್ತರು ವೀಕ್ಷಿಸಿದ್ದಾರೆ.ವಿಡಿಯೋದಲ್ಲಿ ಆಟೋ ಚಾಲಕ ಪೊಲೀಸರ ಬೈಕ್ ಗುದ್ದಿದ ದೃಶ್ಯ ಲಭ್ಯವಾಗಿದ್ದುಇಬ್ಬರ ನಡುವೆ ವಾದ ವಿವಾದ ನಡುವೆ ಕೋಪಗೊಂಡ ಪೊಲೀಸ್ ಕಪಾಳಮೋಕ್ಷ ಮಾಡಿದ್ದ.ತಪ್ಪಿಲ್ಲದ ತಪ್ಪಿಗೆ ವಾದವಿವಾದ ಮಾಡ್ತಿದ್ದ ಆಟೋ ಚಾಲಕನಿಗೆ ಎಎಸ್ಐ ಕಪಾಳ ಮೋಕ್ಷ ಮಾಡಿದ.ಸದ್ಯ ವಿಡಿಯೋ ಪರಿಶೀನಲನೆ ಮಾಡಿ ಮಾಹಿತಿ ತರಿಕೊಳ್ಳಲು ಸಂಚಾರ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಮುಂದಾಗಿದ್ದಾರೆ.