Publish Date: Sat, 17 Jun 2023 (19:00 IST)
Updated Date: Sat, 17 Jun 2023 (20:09 IST)
ಕರೆಂಟ್ ಬಿಲ್ ನೋಡಿ ದಂಪತಿಗಳಿಬ್ಬರೂ ಶಾಕ್ ಆಗಿದ್ದಾರೆ. ಮನೆ ಬಾಡಿಗೆ 6 ಸಾವಿರ ರೂಪಾಯಿ ಇದ್ದು, ಈ ಬಾರಿ ಕರೆಂಟ್ ಬಿಲ್ ಮೊತ್ತ 6,800 ರೂಪಾಯಿ ಬಂದಿದೆ. ಕಲಬುರಗಿ ನಗರದ P & T ಕಾಲೋನಿಯಲ್ಲಿರೋ ವಿಠಲ್ ದಂಪತಿ ಈ ಬಾರಿ ಬಿಲ್ ಕಂಡು ಶಾಕ್ ಆಗಿದ್ದಾರೆ. ಪ್ರತಿ ತಿಂಗಳು ಸರಾಸರಿ 2,800 ರೂ. ಯಿಂದ 3000 ಸಾವಿರ ರೂ. ಬಿಲ್ ಬರ್ತಿತ್ತು. ಆದರೆ ಜೂನ್ ತಿಂಗಳ ಬಿಲ್ 6,800 ರೂ. ಬಂದಿದೆ. ಮೇ ತಿಂಗಳ ಕೊನೆಯಲ್ಲಿ 10 ದಿನಗಳು ಊರಿಗೆ ಹೋದರು ದುಪ್ಪಟ್ಟು ಬಿಲ್ ಬಂದಿದೆ. ತಿಂಗಳ ಬಾಡಿಗೆನೇ 6,000 ರೂ. ಕಟ್ಟುವಾಗ, 6,800 ಕರೆಂಟ್ ಬಿಲ್ ಕಟ್ಟುವ ಪರಿಸ್ಥಿತಿ ಎದುರಾಗಿದೆ. ಅದು ಯಾವ ನ್ಯಾಯ ಅಂತಾ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.