Publish Date: Wed, 31 Jul 2019 (14:49 IST)
Updated Date: Wed, 31 Jul 2019 (14:51 IST)
ಮಾಜಿ ಸಿಎಂ ಎಸ್.ಎಂ.ಕೃಷ್ಣರ ಅಳಿಯ, ಉದ್ಯಮಿ ಸಿದ್ದಾರ್ಥ ಹೆಗೆಡೆ ಶವ ನದಿಯಲ್ಲಿ ಪತ್ತೆಯಾಗಿರೋ ಹಿನ್ನೆಲೆಯಲ್ಲಿ ಇತ್ತ, ಕಾಫಿ ಡೇ ಸಂಸ್ಥೆಯಲ್ಲಿ ಸಭೆ ನಡೆಸಲಾಗಿದೆ.
ಕೆಫೆ ಕಾಫಿ ಡೇ ಸಂಸ್ಥೆ ನಿರ್ದೇಶಕರು ಸಭೆ ನಡೆಸಿದ್ದು, ಕಾಫಿ ಡೇಯನ್ನು ಮುಂದುವರಿಸೋ ತೀರ್ಮಾನ ಕೈಗೊಂಡಿದ್ದಾರೆ. ಸಿಸಿಡಿಯ ನಿರ್ದೇಶಕರು ಸಿದ್ಧಾರ್ಥ್ ಹೆಗಡೆ ಅವರ ಕನಸಿನ ಕೂಸು ಕೆಫೆ ಕಾಫಿ ಡೇಯನ್ನು ಮುಂದುವರಿಸೋ ನಿರ್ಧಾರಕ್ಕೆ ಬಂದಿದ್ದಾರೆ.
ಸಿದ್ದಾರ್ಥ ಹೆಗಡೆ, ವಿಶ್ವಾದ್ಯಂತ 10ಕ್ಕೂ ಹೆಚ್ಚು ದೇಶಗಳಲ್ಲಿ ಕಾಫಿ ಡೇ ಆರಂಭಿಸಿದ್ರು. 1,772 ಕಾಫಿ ಡೇ ಔಟ್‍ಲೇಟ್‍ಗಳ ಮಾಲೀಕರಾಗಿದ್ದರು.
ಕಾಫಿ ಡೇ ಸಂಸ್ಥೆಯ ನಿರ್ದೇಶಕರಾದ ನಿತೀಶ್ ಬಾಗ್ಮನೆ, ಎಸ್.ವಿ.ರಂಗನಾಥ್ ನೇತೃತ್ವದಲ್ಲಿ ಸಭೆ ನಡೆಯಿತು.