Publish Date: Wed, 31 Jul 2019 (14:38 IST)
Updated Date: Wed, 31 Jul 2019 (14:42 IST)
ಟಿಪ್ಪು ಸುಲ್ತಾನ್ ವಿವಾದಿತ ವ್ಯಕ್ತಿಯಾಗಿದ್ದಾನೆ. ಸರಕಾರ ಟಿಪ್ಪು ಜಯಂತಿ ಆಚರಣೆ ರದ್ದುಗೊಳಿಸಿರೋದು ಸರಿಯಾದ ಕ್ರಮವಾಗಿದೆ ಅಂತ ಉಡುಪಿ ಶ್ರೀ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿರುವ ಉಡುಪಿ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ, ಟಿಪ್ಪು ಸುಲ್ತಾನ್ ಮತಾಂಧನಾಗಿದ್ದಾನೆ. ವಿವಾದಿತ ವ್ಯಕ್ತಿಯ ಜಯಂತಿ ಆಚರಿಸಿದ್ರೆ ಮತ್ತೊಂದಿಷ್ಟು ವಿವಾದಗಳು ಹುಟ್ಟಿಕೊಳ್ಳುತ್ತವೆ ಎಂದಿದ್ದಾರೆ.
ಟಿಪ್ಪು ಸುಲ್ತಾನ್ ಕ್ರೌರ್ಯಿಯಾಗಿದ್ದು, ಆತನ ದಬ್ಬಾಳಿಕೆಯಿಂದಾಗಿ ಐಯ್ಯಂಗಾರ ಸಮಾಜದವರು ದೀಪಾವಳಿಯನ್ನೇ ಆಚರಣೆ ಮಾಡುತ್ತಿಲ್ಲ ಅಂತ ಉಡುಪಿ ಶ್ರೀ ಹೇಳಿದರು.
ಅಲ್ಪಸಂಖ್ಯಾತರಲ್ಲಿ ವಿವಾದ ಇಲ್ಲದ ವ್ಯಕ್ತಿಗಳ ಜಯಂತಿ ಆಚರಣೆ ಆಗಲಿ ಎಂದ ಅವರು, ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾಗಬೇಕೆಂದು ಒತ್ತಾಯ ಮಾಡಿದ್ದಾರೆ.