Select Your Language

Notifications

webdunia
webdunia
webdunia
webdunia

ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ವ್ಯಕ್ತವಾದ ಆಕ್ರೋಶ

ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ವ್ಯಕ್ತವಾದ ಆಕ್ರೋಶ
ದಾವಣಗೆರೆ , ಶನಿವಾರ, 10 ನವೆಂಬರ್ 2018 (14:46 IST)
ದಾವಣಗೆರೆ ನಗರದ ಹೈ ಸ್ಕೂಲ್ ಮೈದಾನದಲ್ಲಿ ಜಿಲ್ಲಾಡಳಿತ, ಪಾಲಿಕೆಯಿಂದ ಟಿಪ್ಪು ಜಯಂತಿ ಆಚರಣೆ‌ ಮಾಡಲಾಗುತ್ತಿತ್ತು. ಈ ವೇಳೆ ಆಚರಣೆಯ ವಿರುದ್ಧ ಹಿಂದೂಪರ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ದಾವಣಗೆರೆನಗರದ ಜಯದೇವ ವೃತ್ತದ ಬಳಿ ಟಿಪ್ಪು ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು, ಟಿಪ್ಪು ಜಯಂತಿ ಆಚರಣೆ ಬೇಡ, ಟಿಪ್ಪು ಒಬ್ಬ ದೇಶ ದ್ರೂಹಿ, ಹಿಂದುಗಳನ್ನು ಹತ್ಯೆ ಮಾಡಿ ದೇಶ ಕೊಳ್ಳೆ ಹೊಡೆದ ಲೂಟಿಕೋರ ಎಂದು ಕಾರ್ಯಕರ್ತರು ಕಿರಿಕಾರಿದರು. ಕಳೆದ  ಹಲವಾರು ವರ್ಷಗಳಿಂದ ಪ್ರತಿಭಟನೆ ಮಾಡಿದರು ಟಿಪ್ಪು ಜಯಂತಿ ನಿಷೇಧ ಮಾಡಿಲ್ಲ. ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸಿ ಪ್ರಸ್ತುತ ಸಿಎಂ ಕುಮಾರಸ್ವಾಮಿಯವರೆ ಜಯಂತಿಗೆ ಮುಂದಾಗಿದ್ದಾರೆ ಅಂತ ಸಿಎಂ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಕಂಡು ಬಂತು. ಕಾರ್ಯಕ್ರಮ ಸ್ಥಳಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ 20ಕ್ಕೂ ಹೆಚ್ಚು ಪ್ರತಿಭಟನಾ ನಿರತರನ್ನು ಪೊಲೀಸರು ವಶಕ್ಕೆ ಪಡೆದರು.

ಕಾರ್ಯಕ್ರಮದಲ್ಲಿ ಮಾತನಾಡಿದ ದಾವಣಗೆರೆ ಉಸ್ತುವಾರಿ ಸಚಿವ ಎಸ್.ಆರ್. ಶ್ರೀನಿವಾಸ್, ಟಿಪ್ಪುವಿನಂತ ಮಹನೀಯರ ಜಯಂತಿ ಆಚರಣೆಗೆ ವಿರೋಧ ಮಾಡುವಂತಹ ನೀಚ ಕೆಲಸ ಕೆಲವರು ಮಾಡುತ್ತಿದ್ದಾರೆ ಎಂದು‌ ಪರೋಕ್ಷವಾಗಿ ಬಿಜೆಪಿಯವರ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಟಿಪ್ಪು ಪ್ರಮುಖ ಪಾತ್ರವಹಿಸಿದ್ದವರು. ಆದರೆ ಅಂತವರ ಜಯಂತಿಯನ್ನು ಮಾಡಲು ಕೆಲವರು ಅಡ್ಡಿಪಡಿಸುತ್ತಿದ್ದಾರೆ. ಟಿಪ್ಪು ಜಯಂತಿ ವಿರೋಧಿಸುವವರು ಮುಸ್ಲಿಂರನ್ನು ದೇಶ ಬಿಟ್ಟು ಆಚೆ ಕಳಿಸಿ ನೋಡೋಣ ಎಂದರು.  



 

Share this Story:

Follow Webdunia kannada

ಮುಂದಿನ ಸುದ್ದಿ

ಟಿಪ್ಪು ಜಯಂತಿ ಆಚರಣೆಗೆ ಹೈಡ್ರಾಮಾ ನಡೆದದ್ದು ಏಕೆ ಗೊತ್ತಾ?