Publish Date: Wed, 31 Jul 2019 (13:57 IST)
Updated Date: Wed, 31 Jul 2019 (14:00 IST)
ದರೋಡೆಗೆ ಯತ್ನಿಸಿದ್ದ ಕುಖ್ಯಾತ ಕಳ್ಳರ ಬಂಧನ ಮಾಡಲಾಗಿದೆ.
ಬೆಂಗಳೂರು ಹೊರವಲಯ ಹೆಬ್ಬಗೋಡಿ ಪೊಲೀಸರು ಯಶಸ್ವಿ ಕಾರ್ಯಚರಣೆ ನಡೆಸಿದ್ದು, ಆರೋಪಿಗಳಾದ ಪೀಟರ್, ರಾಕೇಶ್, ಮಹೇಶ್, ಅಣ್ಣಾದೊರೈ, ರಾಜೇಶ್ ರನ್ನು ಬಂಧನ ಮಾಡಿದ್ದಾರೆ.
ಕಾಟನ್ ಪೇಟೆ, ಮೈಕೋ ಲೇಔಟ್, ಜೆಪಿ ನಗರ ಸೇರಿದಂತೆ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿವಿಧ ಪ್ರಕರಣಗಳಿಗೆ ಬೇಕಾಗಿದ್ದ ಆರೋಪಿಗಳು ಇವರಾಗಿದ್ದಾರೆ.
ಕೊಲೆ, ದರೋಡೆ, ಕೊಲೆಗೆ ಯತ್ನ ಪ್ರಕರಣಗಳು ಈ ಗ್ಯಾಂಗ್ ಮೇಲೆ ದಾಖಲಾಗಿವೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳು ಹಾಗೂ ಎರಡು ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ ಪೊಲೀಸರು.
ಹೆಬ್ಬಗೋಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಗದೀಶ್, ಪಿಎಸ್ಐ ಶಂಕರಪ್ಪ ಅವರ ತಂಡದಿಂದ ಯಶಸ್ವಿ ಕಾರ್ಯಾಚರಣೆ ನಡೆದಿದೆ.