Select Your Language

Notifications

webdunia
webdunia
webdunia
webdunia

ಸಿದ್ದಾರ್ಥ ಹೆಗಡೆ ಕಾರು ಚಾಲಕನ ತೀವ್ರ ವಿಚಾರಣೆ

ಸಿದ್ದಾರ್ಥ ಹೆಗಡ
ಬಿಜೆಪಿ ಹಿರಿಯ ಮುಖಂಡ ಎಸ್.ಎಂ.ಕೃಷ್ಣ ಅವರ ಅಳಿಯ, ಉದ್ಯಮಿ ಸಿದ್ಧಾರ್ಥ್ ಹೆಗಡೆ ನಾಪತ್ತೆ ಪ್ರಕರಣಕ್ಕೆ ಸಂಬಂಧ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ.

ಕಾರು ಚಾಲಕನನ್ನು ವಶಕ್ಕೆ ಪಡೆದುಕೊಂಡಿರೋ ಪೊಲೀಸರು ಸಿದ್ಧಾರ್ಥ್ ಅವರ ಬಗೆಗೆ ವಿಚಾರಣೆ ನಡೆಸುತ್ತಿದ್ದಾರೆ.
ಚಾಲಕ ಬಸವರಾಜ್ ಪಾಟೀಲ್ ಜತೆಗೆ ಕಾರಿನಲ್ಲಿ ಸಿದ್ಧಾರ್ಥ ಹೆಗಡೆ ಪ್ರಯಾಣ ಬೆಳೆಸಿದ್ದರು. ಕಾರು ಸಕಲೇಶಪುರ ಕಡೆಗೆ ಹೊರಟಿತ್ತು. ಆದರೆ ಪುನಃ ಕಾರನ್ನು ತಿರುಗಿಸಲು ಹೇಳಿದ್ದಾರೆ.

ನೇತ್ರಾವತಿ ನದಿಯ ಸೇತುವೆ ಬಳಿ ಕಾರು ನಿಲ್ಲಿಸಿದ್ದಾಗಿ ಚಾಲಕ ಹೇಳಿದ್ದಾನೆ. ಸೇತುವೆ ಬಳಿಯಿಂದಲೇ ಸಿದ್ದಾರ್ಥ್ ಕಾಣೆಯಾಗಿದ್ದಾರೆ ಎನ್ನಲಾಗಿದೆ.

ಪೊಲೀಸ್ ಹಿರಿಯ ಅಧಿಕಾರಿಗಳು ಕಾರು ಚಾಲಕ ಬಸವರಾಜ್ ಪಾಟೀಲ್ ನನ್ನು ಪ್ರಶ್ನಿಸುತ್ತಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಸ್ಪೀಕರ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದು ನಾಮಪತ್ರ ಸಲ್ಲಿಕೆ