Publish Date: Sat, 24 Nov 2018 (19:39 IST)
Updated Date: Sat, 24 Nov 2018 (19:41 IST)
ಆತ ಹೇಳಿ ಕೇಳಿ ರೈತ. ಕೃಷಿ ಚಟುವಟಿಕೆ ಮಾಡಿ ನಾಡಿನ ಅನ್ನ ನೀಡುತ್ತಿರುವ ರೈತ ಕೈಯಲ್ಲಿ ವಿಷದ ಬಾಟಲಿ ಹಿಡಿದು ಪ್ರತಿಭಟನೆಗೆ ಕುಳಿತಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ಕೆ.ವಿ ಟ್ರೇಡರ್ಸ್ ಮತ್ತು ಕೆ.ವಿ ಕೃಷಿ ಕೇಂದ್ರ ಅಂಗಡಿಯ ಮ್ಯಾನೇಜರ್ ಆದ ಬಿರೇಶ.ಸಿ.ಇಟಗಿ ಅವರಿಂದ ಅನ್ಯಾಯವಾಗಿದೆ. ನ್ಯಾಯ ದೊರಕಿಸಿಕೊಡಿ ಎಂದು ಪಾಲುದಾರನಾದ ಸಣ್ಣಪ್ಪ.ಕೆ.ಬಾರ್ಕಿ ಆಗ್ರಹ ಮಾಡಿದ್ದಾರೆ.
ಬಾರ್ಕಿಯವರಿಗೆ ಮಾಡಿದ ವಂಚನೆಯನ್ನು ಖಂಡಿಸಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲ್ಲೂಕು ಚಳಗೇರಿ ಗ್ರಾಮದಲ್ಲಿ ಪ್ರತಿಭಟನೆ ಮಾಡಿದರು. ನನಗಾದ ಅನ್ಯಾಯವನ್ನು ಸರಿಪಡಿಸಿ ಇಲ್ಲವಾದಲ್ಲಿ ವಿಷಸೇವನೆ ಮಾಡುತ್ತೆನೆಂದು ವಿಷದ ಬಾಟಲಿಯನ್ನು ಕೈಯಲ್ಲಿ ಹಿಡಿದು ಪ್ರತಿಭಟನೆ ಮಾಡುತ್ತಿದ್ದಾರೆ.
ಇನ್ನೂ ಪ್ರತಿಭಟನೆಯಲ್ಲಿ ಹಲವು ಜನರು ಭಾಗಿಯಾಗಿದ್ದಾರೆ.
Jagadeesh
Publish Date: Sat, 24 Nov 2018 (19:39 IST)
Updated Date: Sat, 24 Nov 2018 (19:41 IST)