Select Your Language

Notifications

webdunia
webdunia
webdunia
webdunia

ಮಾಧ್ಯಮಗಳ ವಿರುದ್ಧ ಹರಿಹಾಯ್ದ ಸಿಎಂ ಹೆಚ್.ಡಿ.ಕುಮಾರಸ್ವಾಮಿ

ಮಾಧ್ಯಮಗಳ ವಿರುದ್ಧ ಹರಿಹಾಯ್ದ ಸಿಎಂ ಹೆಚ್.ಡಿ.ಕುಮಾರಸ್ವಾಮಿ
ಮಂಡ್ಯ , ಶನಿವಾರ, 24 ನವೆಂಬರ್ 2018 (13:21 IST)
ಮತ್ತೆ ಮಾಧ್ಯಮಗಳ ವಿರುದ್ಧ ಸಿಎಂ ಹರಿಹಾಯ್ದಿದ್ದಾರೆ. ಸಾಲಮನ್ನಾ ವಿಷಯದಲ್ಲಿ ಮಾಧ್ಯಮಗಳಲ್ಲಿ ಕೆಲವು ಗೊಂದಲ ಸುದ್ದಿಗಳು ಬರುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮಂಡ್ಯದ ದುದ್ದ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಸಾಲಮನ್ನಾ ವಿಷಯದಲ್ಲಿ ಮಾಧ್ಯಮಗಳಲ್ಲಿ ಕೆಲ ಗೊಂದಲ ಸುದ್ದಿಗಳು ಬರುತ್ತಿವೆ. ಬಿಜೆಪಿ ನಾಯಕರು ಸಾಲಮನ್ನಾ ವಿಷಯದಲ್ಲಿ ಬುರುಡೆ ಭಾಷಣ ಮಾಡ್ತಿದ್ದಾರೆ. ಇದರಿಂದ ಜನರನ್ನು ಚಿಂತೆಗೀಡು ಮಾಡುವಂತೆ ಆಗಿದೆ ಎಂದರು.
ಮಂಡ್ಯದಲ್ಲಿ ಸಿಎಂಗೆ ಆತ್ಮಹತ್ಯೆ ಸ್ವಾಗತ ಎಂದು ಮಾಧ್ಯಮಗಳು ಸುದ್ದಿ ಮಾಡಿವೆ. ಆತ ಕಾಯಿಲೆಯಿಂದ ಬಳಲುತ್ತಿದ್ದ. ಸಿಎಂ ಬರುವ ದಿನ ಆತ್ಮಹತ್ಯೆ ಮಾಡಿಕೊಂಡರೆ ಕುಟುಂಬಕ್ಕೆ ಅನುಕೂಲ ಆಗುತ್ತೆ ಅಂತ ಮಾಡಿಕೊಂಡಿರಬಹುದು.
ಆತನ ಕುಟುಂಬದ ಜೊತೆ ಕೆಲವರು ರೈತ ಸಂಘದ ಹೆಸರೇಳಿಕೊಂಡು ಚಿತಾವಣೆ ಮಾಡಿದ್ದಾರೆ. ಅವನ ಸಾವಿಗೆ ನಾನು ಕಾರಣನಲ್ಲ ಎಂದರು.

ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟವನ್ನು ಮಾಧ್ಯಮದವರು ಬಿಟ್ಟು ಬಿಡದೇ ಹೊಡೆದರು. ಮುಂದಿನ ಬಜೆಟ್ ನಲ್ಲಿ 24 ಸಾವಿರ ಕೋಟಿ ರಾಷ್ಟ್ರೀಕೃತ ಬ್ಯಾಂಕ್ ಸಾಲಮನ್ನಾಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಬಾಗಲಕೋಟೆಯಲ್ಲಿ ವ್ಯಕ್ತಿಯೊಬ್ಬ ಪ್ರತಿಭಟನೆ ವೇಳೆ ನನ್ನ ಪ್ರತಿಕೃತಿಗೆ ಹೊಡೆಯುತ್ತಿದ್ದಾನೆ. ಯಾಕಪ್ಪ ನನಗೆ ಹೊಡೀತೀಯಾ... ಸಾಲಮನ್ನಾ ಮಾಡಿದೆ ಅಂತ ಹೊಡಿತಿದ್ಯಾ? ಅದನ್ನ ನಮ್ಮ ಮಾಧ್ಯಮದವರು ಐದೈದು ನಿಮಿಷಕ್ಕೂ ತೋರಿಸ್ತಾರೆ ಎಂದರು.

ಎಲೆಕ್ಟ್ರಾನಿಕ್ ಮೀಡಿಯಾ ದಲ್ಲಿ ಅವರವರೇ ವಿಚಾರ ಸೃಷ್ಟಿ ಮಾಡಿ ನನ್ನ ವಿರುದ್ದ ಸುಳ್ಳು ಸುದ್ದಿ ಪ್ರಕಟಿಸ್ತಾರೆ.
ನಾನು ರಾಜಕಾರಣದಲ್ಲಿ ಭಂಡ ಅಲ್ಲ. ಬಡವರ ಕಷ್ಟಕ್ಕೆ ಸ್ಪಂದಿಸ್ತೇನೆ ಎಂದು ಸಿಎಂ ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಮೈತ್ರಿ ಸರ್ಕಾರದಲ್ಲಿ ಫೋನ್ ಕದ್ದಾಲಿಕೆ ; ಫೋನ್ ಕದ್ದಾಲಿಕೆ ಬಿಜೆಪಿ ಸಂಸ್ಕೃತಿ ಎಂದ ಸಚಿವ ಕೃಷ್ಣ ಬೈರೇಗೌಡ