Select Your Language

Notifications

webdunia
webdunia
webdunia
webdunia

ಸಾಣೆಹಳ್ಳಿ ಪಂಡಿತಾರಾಧ್ಯ ಶ್ರೀಗಳಿಗೆ ಸವಾಲ್ ಹಾಕಿದ ಎಂಎಲ್ಸಿ

ಸಾಣೆಹಳ್ಳಿ ಪಂಡಿತಾರಾಧ್ಯ ಶ್ರೀಗಳಿಗೆ ಸವಾಲ್ ಹಾಕಿದ ಎಂಎಲ್ಸಿ
ಚಿತ್ರದುರ್ಗ , ಶುಕ್ರವಾರ, 23 ನವೆಂಬರ್ 2018 (18:44 IST)
ಸಾಣೆಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿಗೆ ವಿಧಾನಪರಿಷತ್ ಸದಸ್ಯರೊಬ್ಬರು ಸವಾಲ್ ಹಾಕಿದ್ದಾರೆ.  

ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಶ್ರೀಗಳ ವಿರುದ್ಧ ಗರಂ ಆಗಿದ್ದಾರೆ. ಚಿತ್ರದುರ್ಗದಲ್ಲಿ ರಘು ಆಚಾರ್ ಹೇಳಿಕೆ ನೀಡಿದ್ದು, ನಾನು ರಾಜಕೀಯ ನಿವೃತ್ತಿಯಾಗುತ್ತೇನೆ. ಸ್ವಾಮೀಜಿಗಳು ಮಠ ಬಿಟ್ಟು ಬರವುದಾದರೆ ಬರಲಿ. ಮೂಲಭೂತ ವಾದಿ ಅನ್ನುವುದಾದರೆ ನಾನು ನಿವೃತ್ತಿ ಪಡೆಯುತ್ತೇನೆ. ಸ್ವಾಮೀಜಿ ಏಕೆ ಹೇಳಿದ್ದಾರೆಂದು ಅವರನ್ನು ಕೇಳಿ. ಅವೆಲ್ಲಾ ನನಗೆ ಅರ್ಥವಾಗುವುದಿಲ್ಲ. ನಾನೇನು ಒಂಟಿಯಾಗಿಲ್ಲ. ಉಪ ಮುಖ್ಯಮಂತ್ರಿಗಳಿಗೆ ಅವಮಾನ ಮಾಡಿದ್ದು ಸ್ವಾಮೀಜಿಗಳಾಗಿ ಸರಿಯೋ ಎಂದು ಪ್ರಶ್ನಿಸಿದರು.

ಶಿಷ್ಟಾಚಾರ ಪಾಲಿಸಲಿಲ್ಲ ಅಂದರೆ ಯಾಕೆ ಮಠಕ್ಕೆ ಕರೆಯಬೇಕಿತ್ತು ಎಂದ ಅವರು, ನೀವು ಶಿಷ್ಟಾಚಾರದ ಪ್ರಕಾರ ಮಠಕ್ಕೆ ಯಾರು ಬರಕೂಡದು ಅಂತ ಹೇಳಿ ಯಾರು ಬರುವುದಿಲ್ಲ. ಈ ಕ್ಷೇತ್ರದಲ್ಲಿ ನಾನು ಎರಡು ಬಾರಿ ಗೆದ್ದಿದ್ದೇನೆ. ನಾನು ತಪ್ಪು ಮಾಡಿಲ್ಲ, ತಪ್ಪು ಮಾಡಿದ್ದರೆ ಹೆದರಿಕೊಳ್ಳುವ ಪ್ರಶ್ನೆ ಇಲ್ಲ. ನಾನು ಅವರ ಭಕ್ತ, ಸ್ವಾಮೀಜಿಗಳು, ಎಂಎಲ್.ಎ ಗಳು ಎಲ್ಲರ ಸ್ವತ್ತು. ನನ್ನ ಮೇಲೆ ಯಾರಾದರೂ ಮಾತನಾಡಬೇಕಾದರೆ, ನಾನು ಸ್ವಾಭಿಮಾನ ಇಟ್ಟುಕೊಂಡು ಬಂದಿದ್ದೇನೆ.

ಸ್ವಾಮೀಜಿ ಒಂದು ಸಮುದಾಯಕ್ಕೆ ಅಲ್ಲ ಎಲ್ಲರಿಗೂ ಸ್ವಾಮೀಜಿಗಳು ನೀವು. ನಾನು ವಿನಮ್ರ ಪೂರ್ವಕವಾಗಿ ಮನವಿ ಮಾಡುತ್ತೇನೆ. ಯಾರ ಬಗ್ಗೆಯೂ ಈ ರೀತಿ ಮಾತನಾಡಬೇಡಿ ಎಂದು ಸ್ವಾಮೀಜಿಗಳಿಗೆ ಆಚಾರ್ ಹೇಳಿದ್ದಾರೆ.
ಸ್ವಾರ್ಥ ರಾಜಕಾರಣ ನಾನು ಮಾಡಿಲ್ಲ. ಎಲೆಕ್ಷನ್ ಮಾಡುವುದಾರೆ ಸ್ವಾಮೀಜಿಗಳು ನೀವು ಚುನಾವಣೆ ಮಾಡಿ ಜನ ನಿರ್ಧಾರ ಮಾಡಲಿ ಎಂದರು.

ನಿಮಗೆ ಇರಿಸು ಮುರಿಸು ಆಗುವುದಾದರೆ ರಾಜಕಾರಣಿಗಳನ್ನ ಕರೆಯಬೇಡಿ ಎಂದು ಡಿಸಿಎಂ ಪರಮೇಶ್ವರ ವಿರುದ್ಧ ಸ್ವಾಮೀಜಿಗಳ ಹೇಳಿಕೆ ಖಂಡಿಸಿ ಸಾಣೆಹಳ್ಳಿ ಶ್ರೀಗಳ ವಿರುದ್ಧ ರಘು ಆಚಾರ್ ಕಿಡಿಕಾರಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಚಳಿಗಾಲದ ಅಧಿವೇಶನದಲ್ಲಿ ಹೈ.ಕ. ಭಾಗದ ಸಮಸ್ಯೆಗಳ ಚರ್ಚೆಯಾಗಲಿ